logo
WhatsApp Image 2026-10-07 at 11.10.42 PM - Copy.jpeg
WhatsApp Image 2026-04-02 at 14.46.04.jpeg

ಕಾರ್ಕಳ: ಬಸ್ಸಿನಿಂದ ಇಳಿಯುತ್ತಿದ್ದ ವೃದ್ಧ ಕೆಳಕ್ಕೆ ಬಿದ್ದು ಸಾವು

ಟ್ರೆಂಡಿಂಗ್
share whatsappshare facebookshare telegram
26 Oct 2026
post image

ಕಾರ್ಕಳ: ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಚಾಲಕ ಏಕಾಏಕಿ ಬಸ್ಸು ಚಲಾಯಿಸಿದ ಪರಿಣಾಮ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ 80 ವರ್ಷದ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕುಕ್ಕುಂದೂರು ಗ್ರಾಮದ ದಿಶಾ ಹಾರ್ಡ್‌ವೇರ್‌ ಬಳಿ ನಡೆದಿದೆ.

ಮೃತರನ್ನು ಮಂಜುನಾಥ ಶೆಟ್ಟಿಗಾರ (80) ಎಂದು ಗುರುತಿಸಲಾಗಿದೆ.

ಅ.24ರಂದು ಮಧ್ಯಾಹ್ನ 12 ಗಂಟೆಗೆ ಕೆಎ-20-ಎಎ-7547 ಸಂಖ್ಯೆಯ ಬಸ್ಸು ಕಾರ್ಕಳದಿಂದ ಜೋಡು ರಸ್ತೆಯ ಕಡೆಗೆ ತೆರಳುತ್ತಿದ್ದಾಗ ಕುಕ್ಕುಂದೂರು ಗ್ರಾಮದ ದಿಶಾ ಹಾರ್ಡ್‌ವೇರ್‌ ಬಳಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಲಾಗಿತ್ತು. ಈ ವೇಳೆ ಬಸ್ಸಿನ ಹಿಂಬದಿಯ ಬಾಗಿಲಿನಿಂದ ಇಳಿಯುತ್ತಿದ್ದ ಮಂಜುನಾಥ ಶೆಟ್ಟಿಗಾರ ಅವರಿಗೆ ಚಾಲಕ ಯಾವುದೇ ಮುನ್ಸೂಚನೆ ನೀಡದೆ ಬಸ್ಸನ್ನು ಏಕಾಏಕಿ ಚಲಾಯಿಸಿದ್ದಾನೆ. ಪರಿಣಾಮ ಆಯತಪ್ಪಿ ಕೆಳಕ್ಕೆ ಬಿದ್ದ ವೃದ್ಧರ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿತ್ತು.

ಗಾಯಾಳುವನ್ನು ಕಾರ್ಕಳದ ರೋಟರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಕಾರ್ಕಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅ.25ರ ರಾತ್ರಿ 12.25ಕ್ಕೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Image 2026-10-20 at 7.47.33 PM.jpeg
WhatsApp Image 2026-10-20 at 7.47.33 PM (1) - Copy.jpeg
WhatsApp Image 2026-10-20 at 6.05.03 PM.jpeg
WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.