



ಕಾರ್ಕಳ : ಕಾರ್ಕಳ ತಾಲೂಕಿನ ಗುಂಡ್ಯಡ್ಕ ದ ಹರೀಶ್ ಅಮೀನ್ ಎಂಬವರ ಮಾಲಕತ್ವದ ಕಲ್ಯಾ ಗ್ರಾಮದ, ಕೈಕಂಬ ಮಂಡೆಚ್ಚಾರು ಎಂಬಲ್ಲಿರುವ ತೋಟದಿಂದ ಕಾರ್ತಿಕ್ ಹಾಗೂ ಇತರ ಮೂರು ಜನರು ಸೇರಿ ಅಡಿಕೆ ಹಾಗೂ ತೆಂಗಿನ ಕಾಯಿಗಳನ್ನು ಕಳವು ಮಾಡಿ ಅಟೋರಿಕ್ಷಾಕ್ಕೆ ತುಂಬಿಸುತ್ತಿದ್ದಾಗ ಹರೀಶ್ ಅಮೀನ್ ಅವರನ್ನು ಕಂಡು ಕಾರ್ತಿಕ್ ಅವರ ಸ್ನೇಹಿತರನ್ನು ಮೂವರು ಹಾಡಿಯಲ್ಲಿ ಓಡಿ ಹೋಗಿದ್ದು , ರಿಕ್ಷಾ ಚಾಲಕನನ್ನು ಬೆನ್ನಟ್ಟಿ ಹಿಡಿದಾಗ ಅಟೋರಿಕ್ಷಾದಲ್ಲಿ ಮೂರು ಗೋಣಿ ಚೀಲಗಳಲ್ಲಿ ೩೦,೦೦೦/- ರೂಪಾಯಿ ಮೌಲ್ಯದ ಅಡಿಕೆ ಹಾಗೂ ತೆಂಗಿನ ಕಾಯಿಗಳನ್ನು ಕಳವು ಮಾಡಿದ್ದರು ಎಂದು ಹರೀಶ್ ಅಮೀನ್ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬಡೆಕಲ್ಲಿನ ಕಾರ್ತಿಕ್(21) ನನ್ನು ಬಂಧಿಸಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.