



ಕಾರ್ಕಳ:ಪರಮ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ,ಶ್ರೀ ಪೇಜಾವರ ಅದೋಕ್ಷಜ ಮಠ ಇವರ ಶುಭಾರ್ಶಿವಾದದೊಂದಿಗೆ ಶ್ರೀ ಕ್ಷೇತ್ರ ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವರ ಸನ್ನಿದಿಯಲ್ಲಿ ವೇದಮೂರ್ತಿ ಶ್ರೀ ಬ್ರಹ್ಮಶ್ರೀ ಎಡಪದವು ತೆಂಕು ಮನೆ ಶ್ರೀ ಮುರುಳೀಧರ ತಂತ್ರಿಗಳು ಇವರ ಪ್ರಧಾನ ಆಚಾರ್ಯತ್ವದಲ್ಲಿ ಅತಿರುದ್ರ ಮಹಾಯಾಗವು ಸ್ವಸ್ತಿ ಶ್ರೀ ಶುಭ ಕೃತ್ ನಾಮ ಸಂವತ್ಸರ ಮೇಷ ಮಾಸ ದಿನ 1 ಸಲುಹುವ ಚೈತ್ರ ಶುದ್ಧ 14 ಯು ದಿನಾಂಕ 15.04.2022 ನೇ ಶುಕ್ರವಾರದಿಂದ ದಿನಾಂಕ 18.04.2022 ನೇ ಸೋಮವಾರದವರೆಗೆ ಮಹಾ ಅನ್ನಸಂತರ್ಪಣೆಯೊಂದಿಗೆ ಜರುಗಲಿರುವುದು. ಮಹಾಯಾಗದಲ್ಲಿ ದಿವ್ಯ ಉಪಸ್ಥಿತಿಯಲ್ಲಿರುವ ಯತಿವರ್ಯರು: ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ,ಕಾರ್ಕಳ ಜೈನ ಮಠದ ರಾಜಗುರು ಧ್ಯಾನಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ, ಕಟಪಾಡಿ ಮಹಾ ಸಂಸ್ಥಾನದ ಶ್ರೀ ವಿಭೂಷಿತ ಕಾಳ ಹಸ್ತೆಂದ್ರ ಸರಸ್ವತಿ ಮಹಾಸ್ವಾಮೀಜಿ, ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ತೀರ್ಥಹಳ್ಳಿ ಗೌರಿಗದ್ದೆಯ ಶ್ರೀ ಅವಧೂತ ವಿನಯ ಗುರೂಜಿ, ಮಂಗಳೂರು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಸೋಲೂರು ಶ್ರೀ ನಾರಾಯಣ ಗುರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಮೂಡುಬಿದರೆ ಕಾರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ. . ಶ್ರೀ ಕ್ಷೇತ್ರದ ಹಿನ್ನೆಲೆ: ಐತಿಹಾಸಿಕ ಪುರಾಣ ಪ್ರಸಿದ್ಧವಾದ ಅಂದಾಜು 800 ರಿಂದ 1000 ವರ್ಷಗಳ ಇತಿಹಾಸವುಳ್ಳ ಪಂಚ ಸಾನ್ನಿಧ್ಯಗಳುಳ್ಳ ಅತೀ ಕಾರ್ಣಿಕ ವುಳ್ಳ ಕ್ಷೇತ್ರ ವೇ ಶ್ರೀ ಉಮಾ ಮಹೇಶ್ವರ ದೇವಸ್ಥಾನ ಕಾರ್ಕಳ ಉಡುಪಿ ಜಿಲ್ಲೆ ಯಲ್ಲಿರುವ ಕ್ಷೇತ್ರ. ಇಲ್ಲಿ ನಡೆದಿರುವ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಅನೇಕ ತಪಸ್ವಿಗಳು ತಪಸ್ಸು ನಡೆಸಿರುವ ,ಯಾಗಗಳನ್ನು ನಡೆಸಿರುವ ಸ್ಥಳ ,ಇಲ್ಲಿರುವ ಪುರಾತನ ಶಿವತಿಕೆರೆಯ ರಚನೆಯು ಎಲ್ಲರಿಗೂ ಇಲ್ಲಿರುವ ಚರಿತ್ರೆಯನ್ನು ಸಾರಿ ಸಾರಿ ಹೇಳುತ್ತಿವೆ. ಪೂರ್ಣ ಶಿಲಾಮಯವಾದ ಕ್ಷೇತ್ರ ಇದಾಗಿದ್ದುಶಿವರಾತ್ರಿ ಯ ಸಮಯದಲ್ಲಿ ಐದು ದಿನಗಳ ವಿಶೇಷ ಜಾತ್ರೆ ದೈವಗಳ ಭೇಟಿಯ ಸಹಿತವಾಗಿ ನಡೆಯುತ್ತಿದೆ.ನವರಾತ್ರಿಯ ದಿನಗಳಂದು ವಿಶೇಷ ಪೂಜೆ ಚಂಡಿಕಾ ಹೋಮ ಅನ್ನ ಸಂತರ್ಪಣೆ ನಡೆಯುತ್ತಿದೆ ಪ್ರತೀ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ರುದ್ರಾಭಿಷೇಕ ನಡೆಯುತ್ತಿದೆ ಸಂಧ್ಯಾ ಕಾಲದಲ್ಲಿ ಭಜನೆ ನಡೆಯುತ್ತಿದೆ
ಧಾರ್ಮಿಕ ಕಾರ್ಯಕ್ರಮಗಳು: ದಿನಾಂಕ 15.04.2022 ಶುಕ್ರವಾರ: ಬೆಳಿಗ್ಗೆ 9.00ಕ್ಕೆ ದೇವತಾ ಪ್ರಾರ್ಥನೆ ;ಬೆಳಿಗ್ಗೆ ಗಂಟೆ 10.00ರಿಂದ ಅಷ್ಟೋತ್ತರ ಶತ ನಾಳಿಕೇರ ಗಣಯಾಗ ;ಶ್ರೀ ನಾಗದೇವರಿಗೆ ಪವಮಾನ ಕಲಶಾಭಿಷೇಕ ;ಶ್ರೀ ಕ್ಷೇತ್ರದ ಧರ್ಮ ದೈವಗಳಿಗೆ ಕಲಶಾಭಿಷೇಕಪೂರ್ವಕ ಪರ್ವ ಸೇವೆ ,ನವಗ್ರಹ ರಿಗೆ ಕಲಶಾಭಿಷೇಕ ಮತ್ತು ಅತಿ ರುದ್ರ ಮಹಾ ಯಾಗದ ರುದ್ರ ಪಾರಾಯಣ ಆರಂಭ ;ಮಧ್ಯಾಹ್ನ ಅನ್ನ ಸಂತರ್ಪಣೆ
16.04.2022 ಶನಿವಾರ :ಬೆಳಿಗ್ಗೆ ಗಂಟೆ 9.00 ರಿಂದ ಶ್ರೀ ದುರ್ಗಾ ದೇವಿಗೆ ಚಂಡಿಕಾ ಹೋಮ ಮತ್ತು ಮಧ್ಯಾಹ್ನ ಅನ್ನ ಸಂತರ್ಪಣೆ; ಸಂಜೆ ಗಂಟೆ 5.00 ರಿಂದ ಯಾಗ ಮಂಟಪದಲ್ಲಿ ವಾಸ್ತು ಪ್ರಕ್ರಿಯೆ ಮತ್ತು ಅರಣಿ ಮಥನ .
17.04.2022 ರವಿವಾರ ಬೆಳಿಗ್ಗೆ ಗಂಟೆ 9.00 ಕ್ಕೆ ಶ್ರೀ ಕ್ಷೇತ್ರ ಉಮಾಮಹೇಶ್ವರ ದೇವರ ಪ್ರೀತ್ಯರ್ಥ ಹಾಗೂ ಲೋಕ ಕಲ್ಯಾಣಾರ್ಥವಾಗಿ ಮಹಾನ್ಯಾಸ ಪೂರ್ವಕ “ಅತಿ ರುದ್ರ ಮಹಾ ಯಾಗ “ ಮಧ್ಯಾಹ್ನ ಗಂಟೆ 12.00 ಕ್ಕೆ ಯಾಗದ ಪೂರ್ಣಾಹುತಿ ಹಾಗೂ ಮಹಾ ಅನ್ನ ಸಂತರ್ಪಣೆ.
ಸಂಜೆ 6.30ರಿಂದ ಶಿವೋಹಂ ಶಿವ ಭಕ್ತಿಗೀತೆಗಳ ರಸಮಂಜರಿ ಕಾರ್ಯಕ್ರಮ.ರಾತ್ರಿ ೭೩೦ ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಆಶೀರ್ವಚನ ಮಂಗಳೂರು ಕುಳಾಯಿ ಚಿತ್ರಪು ಮಠದ ವಿಧ್ಯೆ೦ದ್ರ ತೀರ್ಥ ಪಾದರು, ಅಧ್ಯಕ್ಷತೆ;ಸುರೇಂದ್ರ ಶೆಟ್ಟಿ ಸಹನಾ ಆಡಳಿತ ಮೊಕ್ತೇಸರರು ಗೌರವ ಉಪಸ್ಥಿತಿ ಶ್ರೀ ವಿ ಸುನೀಲ್ ಕುಮಾರ್,ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವರು,ಡಾ.ಎಂ ವೀರಪ್ಪ ಮೊಯಿಲಿ ಮಾಜಿ ಮುಖ್ಯಮಂತ್ರಿಗಳು,ಮುಖ್ಯ ಅತಿಥಿಗಳು ಡಾ ಎಂ ಮೋಹನ್ ಆಳ್ವ ಸಂಸ್ಥಾಪಕರು ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡುಬಿದಿರೆ, ಅಣ್ಣಪ್ಪ ಹೆಗ್ಡ ಇಮಾಜಿ ಶಾಸಕರು ಹಾಗೂ ಆಡಳಿತ ಧರ್ಮದರ್ಶಿ ಶ್ರೀ ಬಸರೂರು ಮಹಾಲಿಂಗೇಶ್ವರ ದೇವಸ್ಥಾನ , ರವೀಂದ್ರ ಶೆಟ್ಟಿ ಬಜಗೋಳಿ, ಅಧ್ಯಕ್ಷರು ಕರ್ನಾಟಕ ರಾಜ್ಯ ಕಲ್ಲು ಗಣಿ ಮಾಲಕರ ಸಂಘ, ರಮೇಶ್ ಕಾರ್ಣಿಕ್, ಚಂದ್ರ ಶೇಖರ್ ಶೆಟ್ಟಿ ಅಧ್ಯಕ್ಶರು ಅತಿರುಧ್ರ ಮಹಾಯಾಗ ಸಮಿತಿ. ತದನಂತರ ಪುಷ್ಪರಸಮಂಜರಿ ಮತ್ತು ಸಪ್ತ ತಾಂಡವ ಎಂಬ ಶಿವತಾಂಡವ ನೃತ್ಯ ರೂಪಕ
18.04.2022 ಸೋಮವಾರ :ಬೆಳಿಗ್ಗೆ 9.00ರಿಂದ ಶ್ರೀ ಉಮಾ ಮಹೇಶ್ವರ ದೇವರಿಗೆ ದ್ರವ್ಯ ಕಲಶ ಸಹಿತ ಶತ ರುದ್ರಾಭಿಷೇಕ ಬಲಿ, ಉತ್ಸವ ಮಹಾ ಪೂಜೆ ನಡೆಯಲಿರುವುದು, ನಂತರ ಮಹಾ ಅನ್ನ ಸಂತರ್ಪಣೆ ನಡೆಯಲಿರುವುದು .ಸಂಜೆ ಗಂಟೆ 6.30 ರಿಂದ ರಂಗ ಪೂಜೆ ಉತ್ಸವ ಬಲಿ,ಮಹಾ ಪೂಜೆ , ಮಹಾ ಮಂತ್ರಾಕ್ಷತೆ ನಡೆಯಲಿದೆ. ರಾತ್ರಿ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಶಿವಧೂತೆ ಗುಳಿಗೆ ತುಳು ನಾಟಕ ನಡೆಯಲಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.