logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ: ಎಳ್ಳಾರೆ ಮುಲ್ಕಾಡು ಶಾಲೆ ಯಲ್ಲಿ ಆಟಿಡೊಂಜಿ ಜೋಕ್ಲೆನ ಕೂಟ ಹಾಗು ಸಂಸ್ಕೃತಿ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ

ಟ್ರೆಂಡಿಂಗ್
share whatsappshare facebookshare telegram
5 Aug 2025
post image

ಕಾರ್ಕಳ, : ತುಳುನಾಡು ಸಂಸ್ಕೃತಿಗಳ ತವರೂರು ಎಂದೇ ಹೆಸರುವಾಸಿಯಾದ ಈ ನಾಡಿನಲ್ಲಿ, ಯಕ್ಷಗಾನ, ದೈವಾರಾಧನೆ, ನಾಗಾರಾಧನೆ ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳು ನಾಶವತ್ತಾಗುತ್ತಿರುವ ಈ ಕಾಲಘಟ್ಟದಲ್ಲಿ, ಹೊಸ ಪೀಳಿಗೆಗೆ ಈ ಪರಂಪರೆಯನ್ನು ಪರಿಚಯಿಸಲು "ಆಟಿಡೊಂಜಿ ಜೋಕ್ಲೆನ ಕೂಟ" ಎಂಬ ವಿಶೇಷ ಕಾರ್ಯಕ್ರಮ ಕಿವಿಮಾತಾಗಿದೆ ಎಂದು

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭಾಸ್ಕರ್ ಟಿ ಅಭಿಪ್ರಾಯ ಪಟ್ಟರು. ಅವರು ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಮುಳ್ಕಾಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಈ ಕಾರ್ಯಕ್ರಮದಲ್ಲಿ. "ಗ್ರಾಮೀಣ ಭಾಗದಲ್ಲಿ ಇಂತಹ ಸಂಸ್ಕೃತಿಯ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಸ್ವಚ್ಛ ಪರಿಸರವಿದ್ದಲ್ಲಿ ಸ್ವಚ್ಛ ಮನಸ್ಸು ಬೆಳೆದೀತು. ಈ ಕಾರ್ಯಕ್ರಮ ಮಕ್ಕಳಲ್ಲಿ ಪರಿಸರದ ಕುರಿತು ಜಾಗೃತಿಯನ್ನು ಹುಟ್ಟಿಸಿದೆ" ಎಂದು ಅವರು ಎಂದು ಸಂತಸ ವ್ಯಕ್ತಪಡಿಸಿದರು.

ಉದ್ಯಮಿ ಕಮಲಾಕ್ಷ ಕಾಮತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, "ವಿದ್ಯೆ ಇಲ್ಲದವನು ಪಶು ಸಮಾನ. ವಿದ್ಯೆಯಿಂದ ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳು ಬೆಳೆಯುತ್ತವೆ. ತಂದೆತಾಯಿಯ ಗೌರವ ಮತ್ತು ವಿನಯಶೀಲತೆ ಮಕ್ಕಳಲ್ಲಿ ಬೆಳೆಬೇಕು" ಎಂದು ಕಿವಿಮಾತು ಹೇಳಿದರು. SDMC ಅಧ್ಯಕ್ಷ ಮತ್ತು ಕಾರ್ಯಕ್ರಮದ ರೂವಾರಿ ಸತೀಶ್ ಪೂಜಾರಿ ಮುಳ್ಳಾಡು ಮಾತನಾಡಿ, "ಸನಾತನ ಧರ್ಮದಲ್ಲಿ ಋಷಿ ಪರಂಪರೆ ಹಾಗೂ ಕೃಷಿ ಪರಂಪರೆಗೆ ವಿಶಿಷ್ಟ ಸ್ಥಾನವಿದೆ. ಶಾಲೆಯ 62 ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹೆಸರಿನಲ್ಲಿ 62 ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಜತೆ ಆಟಿ ತಿಂಗಳ ಹಿನ್ನಲೆಯಲ್ಲಿ ಮಕ್ಕಳಿಗೆ ಹಳೆಯ ಕಾಲದ ಕಷ್ಟದ ದಿನಗಳನ್ನು ಪರಿಚಯಿಸುವ ಪ್ರಯತ್ನವಾಗಿದೆ" ಎಂದು ವಿವರಿಸಿದರು. ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕೇಶ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು. ದಿನೇಶ್ ಪೈ ಮುನಿಯಾಲು, ಕವಿತಾ ರಾಮಕೃಷ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸದಾಶಿವ ಪ್ರಭು,ಉಡುಪಿ‌ ನಗರಸಭೆ ಸದಸ್ಯ ಸದಾನಂದ ಕುಲಾಲ್, ಜ್ಯೋತಿ ಹರೀಶ್, ಅರುಣ್ ಹೆಗ್ಡೆ, ಮಾಲತಿ ಕುಲಾಲ್, ವಿಶ್ವನಾಥ ನಾಯಕ್, ರವೀಂದ್ರ ಪ್ರಭು ಕಡ್ತಲ, ಅರಣ್ಯಾಧಿಕಾರಿ ಕರುಣಾಕರ ಜೆ‌ ಆಚಾರ್ಯ , ರವಿ ಪೂಜಾರಿ ಸೇರಿದಂತೆ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕ ಸುಭಾಷ್ ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯೋಪಾಧ್ಯಾಯ ಜನಾರ್ದನ ಬೆಳಿರಾಯ ಸ್ವಾಗತ ಭಾಷಣ ಮಾಡಿದರು. ಶಿಕ್ಷಕಿ ರೂಪಶ್ರಿ ಪ್ರಭು ಹಾಗೂ ಇತರ ಶಿಕ್ಷಕರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.