



ಕಾರ್ಕಳ : ಹಿರಿಯ ಸಾಹಿತಿ , ಹರಿದಾಸ ದಿವಂಗತ ಅಂಬಾತನಯ ಮುದ್ರಾಡಿ ಸ್ಮರಣಾರ್ಥ ಮಂಗಳೂರು , ಉಡುಪಿ , ಕಾಸರಗೋಡು ಮೂರು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಶ್ರೀಕೃಷ್ಣ ವೇಷ ಧರಿಸಿ ಭಗವದ್ಗೀತೆ ಶ್ಲೋಕ ಕಂಠಪಾಠ ಸ್ಪರ್ಧೆ ದಶಂಬರ್ 17 ರವಿವಾರ ಕಾರ್ಕಳ ಶ್ರೀ ಭುವನೇಂದ್ರ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ . ಭಗವದ್ಗೀತೆಯ ದ್ವೀತೀಯ ಅಧ್ಯಾಯ ಸಾಂಖ್ಯಯೋಗದ 4 ಶ್ಲೋಕಗಳ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಿಗೆ 30000 ನಗದು ಬಹುಮಾನ ನೀಡಲಾಗುವುದು . ಹೆಚ್ಚಿನ ವಿವರಗಳನ್ನು ಸ್ಪರ್ಧಾ ಆಯೋಜಕ ಹೊಸಸಂಜೆ ಬಳಗದ ಅಧ್ಯಕ್ಷ ಆರ್ .ದೇವರಾಯ ಪ್ರಭು 9845939051 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.