



ಕಾರ್ಕಳ : ಇಲ್ಲಿನ ಶ್ರೀನಿವಾಸಾಶ್ರಮದಲ್ಲಿರುವ ಕಾಶೀಮಠದ ಆಡಳಿತಕ್ಕೆ ಒಳಪಟ್ಟ ಸುಕೃತೀಂದ್ರ ಬಾಕಾಶ್ರಮದಲ್ಲಿ ಭಕ್ತಾದಿಗಳ ಉಪಸ್ಥಿತಿಯಲ್ಲಿ ಶ್ರೀಕಾಶೀಮಠಾಧೀಶ ಭುವನೇಂದ್ರ ಸ್ವಾಮಿಜಿ ಅವರ ಪುಣ್ಯತಿಥಿಯನ್ನು ಇತ್ತೀಚೆಗೆ ಆಚರಿಸಲಾಯಿತು.
ಬೆಳಿಗ್ಗೆ ಸ್ತೋತ್ರ ಪಠಣ, ಭಜನಾ ಕಾರ್ಯಕ್ರಮ ನಡೆದವು. ಮಧ್ಯಾಹ್ನ ಮುರಳೀಧರ ಗೋಪಾಲಕೃಷ್ಣ ದೇವರ ಪೂಜೆ, ಗುರು ಪೂಜೆ ಸಂಪನ್ನ ಗೊಂಡವು.
ವೆಂಕಟರಮಣ ಮಹಿಳಾ ಭಜನಾ ಮಂಡಳಿ ಹಾಗೂ ವೆಂಕಟರಮಣ ಭಜನಾ ಮಂಡಳಿ ವತಿಯಿಂದ ಸಂಕೀರ್ತನಾ ಕಾರ್ಯಕ್ರಮ ನಡೆದವು.
ಭುವನೇಂದ್ರ ಕಾಲೇಜಿನ ಉಪನ್ಯಾಸಕ ಡಾ.ಸುಮಂತ ಜೋಶಿ ಗುರುಗುಣ ಮಾಡಿದರು.
ವೇದಮೂರ್ತಿ ಗೋಪಿನಾಥ ಪುರಾಣಿಕ ಅವರು ಧಾರ್ಮಿಕ ವಿಧಾನಗಳನ್ನು ನಡೆಸಿದರು. ಸೇವಾದಾರರ ಪರವಾಗಿ ಬೋಳ ಶ್ರೀನಿವಾಸ ಕಾಮತ್, ಕಾಶೀಮಠ ವ್ಯವಸ್ಥಪನಾ ಸಮಿತಿಯ ಪಾಲಡ್ಕ ನರಸಿಂಹ ಪೈ, ಯು.ಸುಬ್ಬಣ್ಣ ಕಾಮತ್ ಇದ್ದರು. ಬಾಲಕಾಶ್ರಮದ ಸಂಚಾಲಕ ಎಂ.ಶ್ರೀನಿವಾಸ ಪೈ ಸ್ವಾಗತಿಸಿದರು. ವ್ಯವಸ್ಥಪನಾ ಸಮಿತಿಯ ಕೋಶಾಧಿಕಾರಿ ಐ.ರವೀಂದ್ರನಾಥ ಪೈ ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.