



ಕಾರ್ಕಳ: ಗುರುವಾಯನಕೆರೆ ರಸ್ತೆಯ ಹೊಸ್ಮಾರು ಸೇತುವೆ ಬಳಿ ಬೈಕ್‌ಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ಅಪಘಾತಗೊಂಡು ನವವಿವಾಹಿತೆ ದಾರುಣವಾಗಿ ಮೃತಪಟ್ಟ ಘಟನೆ ಜೂ 28 ರ ಸಂಜೆ ಹೊಸ್ಮಾರು ಬಳಿ ನಡೆದಿದೆ.
ಈದು ಗ್ರಾಮದ ಕರೆಂಬಾಲುವಿನ ವಿಶಾಲ್ ಅವರ ಪತ್ನಿ ನೀಕ್ಷಾ (26) ಎಂಬವರೇ ಮೃತಪಟ್ಟ ಮಹಿಳೆ. ಮದುವೆಯಾಗಿ ಮೂರು ತಿಂಗಳು ಕಳೆದಿದ್ದು ಇವರು ಗಂಡನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ನಾಯಿ ರಸ್ತೆಗೆ ಅಡ್ಡ ಬಂದಿದ್ದು, ಪರಿಣಾಮ ಬೈಕ್ ರಸ್ತೆಗೆಸೆಯಲ್ಪಟ್ಟಿತ್ತು. ಘಟನೆಯಿಂದ ಸಹಸವಾರೆ ನೀಕ್ಷಾ ಅವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು. ನೀಕ್ಷಾ ಅವರ ತಂದೆ ಪ್ರೀತಿ ಟೈಮ್ಸ್ ಸೆಂಟರ್ ಮಾಲಕ ಪ್ರಕಾಶ್ ಅವರು 9 ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದು. ಮೃತದೇಹ ಕಾರ್ಕಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.