



ಡಬಲ್ ಎಂಜಿನ್ ಸರಕಾರದಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯ: ಅಣ್ಣಾಮಲೈ
ಕ್ಷೇತ್ರದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಸಿ, ಹಕ್ಕು ಪತ್ರ ವಿತರಣೆ ಮಾಡಿದ ಹೆಮ್ಮೆ ಇದೆ: ವಿ.ಸುನಿಲ್ ಕುಮಾರ್
ಕಾರ್ಕಳ: ಕಾರ್ಕಳ ಕ್ಷೇತ್ರದಲ್ಲಿ ಟ್ರಿಪಲ್ ಎಂಜಿನ್ ಸರಕಾರವಿದ್ದು, ಅದಕ್ಕಾಗಿ, ನಮಗೆ ಬಹುಮತದ ಸರಕಾರ ಬೇಕು, ಡಬಲ್ ಎಂಜಿನ್ ಸರಕಾರದಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯ ವೆಂದು ತಮಿಳು ನಾಡು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
ರವಿವಾರ ಅವರು ಕಾರ್ಕಳ ಕಾರೋಲ್ ಗುಡ್ಡೆ ಎಂಬಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಪರ ಮತಯಾಚಿಸಿ ಮಾತನಾಡಿದರು.
ನಮಗೆ ಕಿಚಿಡಿ ಸರಕಾರ ಗಳು ಬೇಡ, ಕಾಂಗ್ರೆಸ್ ಪಕ್ಷವೆ ಔಟ್ ಆಫ್ ವಾರಂಟಿ ಅವರಿಂದ ಗ್ಯಾರಂಟಿಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದವರು ಹೇಳಿದರು.
ತಮಿಳು ನಾಡಿನಲ್ಲಿ ಕಾಂಗ್ರೆಸ್ ಸಮ್ಮಶ್ರ ಸರಕಾರವಿದ್ದು, ಚುನಾವಣಾ ಪ್ರಣಾಳಿಕೆಯಲ್ಲಿ 2000 ನೀಡುತ್ತೇವೆ ಚುನಾವಣಾ ಪ್ರನಾಳಿಕೆಯಲ್ಲಿ ಹೇಳಿದ್ದರು . ಆದರೆ ಇಂದಿಗೂ ನೀಡಿಲ್ಲಾ ಎಂದರು.
ಸುನೀಲ್ ಕುಮಾರ್ ಬಗ್ಗೆ ಅಪಪ್ರಚಾರ ಮಾಡುತಿದ್ದಾರೆ , ಅದನ್ನು ಒಂದುಕಿವಿಯಲ್ಲಿ ಕೇಳಿಸಿಕೊಂಡು ಇನ್ನೊಂದು ಕಿವಿಯಲ್ಲಿ ಬಿಡಿ ಎಂದರು. ಪೋಲಿಸ್ ಅಧಿಕಾರಿಯಾಗಿ ಈ ಭಾಗದಲ್ಲಿ ಕರ್ತವ್ಯ ನಿರ್ವಹಿಸೊದ ಬಗ್ಗೆ ಹೆಮ್ಮೆ ಇದೆ ಎಂದರು.
ಬಿಜೆಪಿ ಪಕ್ಷದ ಅಭ್ಯರ್ಥಿ ಸುನೀಲ್ ಕುಮಾರ್ ಮಾತನಾಡಿ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಸಿ ಹಕ್ಕು ಪತ್ರ ವಿತರಣೆ ಮಾಡಿದ ಹೆಮ್ಮೆ ಇದೆ ಎಂದರು. ಕಲ್ಲು ಗಣಿಗಾರಿಕೆ ಅಕ್ರಮ ವೆಂದು ಲೋಕಾಯುಕ್ತಕ್ಕೆ ದೂರು ನೀಡಿದ ಕಾರಣ ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಮಯದಲ್ಲಿ ಆರು ತಿಂಗಳು ಗಣಿಗಾರಿಕೆ ನಿಂತಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕುಲಕಸುಬಿಗೆ ಅತಂಕವಿದೆ ಎಂದರು.
ಸಭೆಯಲ್ಲಿ ಬಿಜೆಪಿ ಪಕ್ಷದ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ನರಸಿಂಹ ಕಾಮತ್ ಸಾಣೂರು ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.