



ಕಾರ್ಕಳ,ಹಾಜಿ ಸೈಯದ್ ಅಬ್ದುಲ್ ಸತ್ತಾರ್, 86 ವರ್ಷ ಕಾರ್ಕಳ ಹಂಚಿಕಟ್ಟಿ ನಿನ್ನೆ ಮುಂಬೈಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸುಮಾರು 55 ವರ್ಷದಿಂದ ಮುಂಬೈಯಲ್ಲಿ ಮೂಹಿ ಟ್ರೇಡಿಂಗ್ ಎಂಬ ರಫ್ತು ಸಂಸ್ಥೆಯನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಹಲವಾರು ಯುವಕರಿಗೆ ಉದ್ಯೋಗವನ್ನು ನೀಡಿದರು. 1982 ರಲ್ಲಿ ಕೇಂದ್ರ ಸರಕಾರದಿಂದ ಕೊಡಲ್ಪಡುವ ಅತ್ಯುತ್ತಮ ರಫ್ತುದಾರ ಪ್ರಶಸ್ತಿಯನ್ನು ಅಂದಿನ ವಿತ್ತ ಸಚಿವರಾದ ಶ್ರೀ ಪ್ರಣವ್ ಮುಖರ್ಜಿಯಿಂದ ಪಡೆದಿದ್ದರು. ಮುಂಬೈ ವೆಲ್ಫೇರ್ ನಲ್ಲಿ ಸುಮಾರು ಮೂವತ್ತು ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಹಾಗೂ ಹಲವಾರು ಬಂಧು-ಮಿತ್ರರನ್ನು ಅಗಲಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.