logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಾರ್ಕಳ : ಕಾಳಿಕಾಂಬದಲ್ಲಿ ಮಕ್ಕಳ‌- ಕಲರವ ಮಕ್ಕಳ ಹಬ್ಬ- ಪ್ರತಿಭಾಪುರಸ್ಕಾರ. ಮಕ್ಕಳೊಂದಿಗೆ ಹೆಜ್ಜೆಹಾಕಿದ ಹೆತ್ತವರು‌ ಸಂಘಟಕರು.. ಲಾಕ್ ಡೌನ್ ನಂತರ ಮಕ್ಕಳಿಗೆ ಮೊದಲ ಅವಕಾಶ ನೀಡಿದ ವೇದಿಕೆ

ಟ್ರೆಂಡಿಂಗ್
share whatsappshare facebookshare telegram
15 Nov 2021
post image

ಕಾರ್ಕಳ: ಜ್ಯೋತಿ ಯುವಕ ಮತ್ತು ಮಹಿಳಾ ಮಂಡಲ(ರಿ) ಇದರ ವಜ್ರಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ಮಕ್ಕಳ ದಿನಾಚರಣೆಯಂದು ಮಕ್ಕಳ ಹಬ್ಬ- ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಾಳಿಕಾಂಬ ಜ್ಯೋತಿ ಮೈದಾನದಲ್ಲಿ ನಡೆಯಿತು. ಒಂದರಿಂದ ಹತ್ತನೇ ತರಗತಿ ವರೆಗಿನ ಮಕ್ಕಳಿಗೆ ಬಾಷಣ, ಚಿತ್ರಕಲೆ, ಛದ್ಮವೇಶ ಮತ್ತು ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಸ್ಮರಣಿಕೆ,‌ ಪ್ರಶಸ್ತಿ ಪತ್ರ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಸಂಶನಾ ಪತ್ರ ನೀಡಿ ಗೌರವಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಪರಿಸರದ ಹದಿನೈದು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕೋವಿಡ್ ಲಾಕ್ ಡೌನ್ ಕಾರಣ ಇಂತಹ ಕಾರ್ಯಕ್ರಮಗಳಿಂದ ವಂಚಿತರಾಗಿದ್ದ ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ತಂಪು ಪಾನೀಯ, ಸಿಹಿಊಟ ಸವಿದ ಮಕ್ಕಳು ಸುರಿತುತ್ತಿರುವ ಮಳೆಯನ್ನು‌ ಲೆಕ್ಕಿಸದೆ ಹಾಡಿಗೆ ಹೆಜ್ಜೆ ಹಾಕಿದರು. ಮಕ್ಕಳ ಉತ್ಸಾಹವನ್ನು ಕಂಡ ಹೆತ್ತವರೂ, ಸಂಘಟಕರು ಅವರ ಜೊತೆ ಕುಣಿದು ಸಂಭ್ರಮಿಸಿದರು. ಮಂಡಲದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ಅನನ್ಯ ಜಯಂತ್ ಉದ್ಘಾಟಿಸಿದ ಕಾರ್ಯಕ್ರಮದ ಅದ್ಯಕ್ಷತೆಯನ್ನು ನೇತ್ರತಜ್ನ ಡಾ.ಪ್ರೇಮದಾಸ್ ವಹಿಸಿದ್ದರು, ಪುರಸಭೆಯ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಥಾಯಿಸಮಿತಿ‌ ಅದ್ಯಕ್ಷ ಲಕ್ಷ್ಮೀ ನಾರಾಯಣ ಮಲ್ಯ,‌ ಉದ್ಯಮಿ ಚಂದ್ರಕಲಾ‌‌ ರಾವ್, ನಿರ್ದೇಶಕ ರವೀಂದ್ರನಾಥ್ ಹೆಗ್ಡೆ, ಗೌರವಾದ್ಯಕ್ಷರುಗಳಾದ ವಾಮನ್ ರಾವ್, ಶ್ರಿಮತಿ ಯಶ, ವಜ್ರಮಹೋತ್ಸವ ಸಮಿತಿ ಅದ್ಯಕ್ಷ ಶಿವದೇವಾಡಿಗ, ಮಹಿಳಾ ಮಂಡಲದ ಅದ್ಯಕ್ಷೆ ಅನಿತಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಕ ಮಂಡಲದ ಅದ್ಯಕ್ಷ ಶುಭದರಾವ್ ಸ್ವಾಗತಿಸಿ ಹರೇಂದ್ರ ರಾವ್ ನಿರೂಪಿಸಿದರು‌ ನಾಗೇಶ್ ಹೆಗ್ಡೆ ದನ್ಯವಾದವಿತ್ತರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.