



ಕಾರ್ಕಳ : ದೀಪಾವಳಿ ಹಬ್ಬದ ಆಧ್ಯಾತ್ಮೀಕ ರಹಸ್ಯ ಕಾರ್ಯಕ್ರಮವು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ಚರೀಯ ವಿಶ್ವ ವಿದ್ಯಾಲಯದಲ್ಲಿ ನವಂಬರ್ ೧೬ರಂದು ಜರಗಿತು. ರಾಜಯೋಗಿನಿ ಬ್ರಹ್ಮಾಕುಮಾರಿ ವಸಂತಿಯವರು ತಮ್ಮ ಪ್ರವಚನದಲ್ಲಿ ದೀಪಾವಳಿ ಯೆಂದರೆ ಮನೆ, ಅಂಗಡಿಯನ್ನು ಸ್ವಚ್ಚ ಮಾಡುತ್ತಾರೆ, ಅದರೆ ಮನಸ್ಸನ್ನು ಸ್ವಚ್ಚ ಮಾಡಬೇಕು. ದೀಪ ಬೆಳಗಿಸುತ್ತಾರೆ ಆದರೆ ವರ್ತಮಾನ ಸಮಯದಲ್ಲಿ ಪರಮಾತ್ಮ ಶಿವ ಅವತರಿತನಾಗಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಆತ್ಮದ ದೀಪ ಬೆಳಗಿಸುತ್ತಾರೆ. ಮನುಷ್ಯರು ಮನೆಯನ್ನು ಶೃಂಗಾರ ಮಾಡುತ್ತಾರೆ, ನಿಜವಾಗಿ ಮನುಷ್ಯರಲ್ಲಿ ದೈವಿಗುಣವನ್ನು ತುಂಬಿಸಬೇಕಾಗಿದೆ. ಮಾನವೀಯ ಮೌಲ್ಯಗಳನ್ನು ಬೆಳಗಿಸಬೇಕು. ದೀಪಾವಳಿಗೆ ವಿಶೇಷವಾಗಿ ಲಕ್ಷ್ಮಿಯಲ್ಲಿ ಹಣ ಮತ್ತು ಭ್ಯಾಗವನ್ನು ಬೇಡುತ್ತಿದ್ದು ಭ್ಯಾಗ ಎಂದರೆ ರ‍್ಯೋಗ , ಸಂಪತ್ತು ಇಲ್ಲದೆ ಶಾಂತಿ ಇರುವುದಿಲ್ಲ ಲಕ್ಷ್ಮಿಯ ಅಹ್ವಾನದಿಂದ ಸುಖ, ಶಾಂತಿ, ನೆಮ್ಮದಿ ಪಾಪ್ತಿಯಾಗಬೇಕಿದೆ ಎಂದರು ಕಾರ್ಯಕ್ರಮದ ಅಂಗವಾಗಿ ವರ್ದಮಾನ ಶಾಲಾ ವಿಧ್ಯಾರ್ಥಿಗಳಿಂದ ಬಾಲಪ್ರತಿಭೆೆಯರಾದ ಆದಿತ್ರೀಯ ಸಿಂಧು ಮತ್ತು ಪ್ರತ್ಯುಸ ಕುಂದರ್ ರವರಿಂದ ಭರತನ್ಯಾಟ ಮತ್ತು ನೃತ್ಯ ಜರಗಿತು. ಬಿ.ಕೆ ವರದರಾಯ ಪ್ರಭು ಸ್ವಾಗತಿಸಿದರು ಸೇವಾಕೇಂದ್ರದ ಸಂಚಾಲಕಿ ಬಿ.ಕೆ ವಿಜಯಲಕ್ಷ್ಮಿ ದನ್ಯವಾದ ಅರ್ಪಿಸಿದರು. ಮತ್ತು ಸುಡುಮದ್ದು ಪ್ರದರ್ಶನ ಜರಗಿತ್ತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.