



ಕಾರ್ಕಳ: ಬೈಕ್‌ನ ಹಿಂಬದಿಯಿ0ದ ಈಚರ್ ಟೆಂಪೋ ಡಿಕ್ಕಿ ಹೊಡೆದ ವೃಧ್ಧಯೊಬ್ಬರು ಮೃತಪಟ್ಟ ಘಟನೆ ಕಾರ್ಕಳ ಕಸಬದ ಶಿವತಿಕೆರೆ ಪೆಟ್ರೋಲ್ ಬಂ ಕ್ ಸಮೀಪದಲ್ಲಿ ನಡೆದಿದೆ.
ಜಯಂತಿ ರಾವ್(೭೦) ಮೃತಪಟ್ಟವರು . ದೇವಸ್ಥಾನದಿಂದ ಮನೆಗೆ ಹಿಂತಿರುಗುತಿದ್ದ ಸಮಯದಲ್ಲಿ ಘಟನೆ ನಡೆದಿದೆ. ಮೃತರು ತನ್ನ ಸಂಬAಧಿಯ ಬೈಕಿನ ಹಿಂಭಾಗದಲ್ಲಿ ಕುಳಿತು ಪಯಣಿಸುತಿದ್ದರು, ಈ ವೇಳೆ ಈಚರ್ ಟೆಂಪೋ ಹಿಂಬದಿಯಿ0ದ ವೇಗವಾಗಿ ಬಂದು ಕಾಲಿಗೆ ಡಿಕ್ಕಿ ಹೊಡೆದ ಪರಿಣಾಮ ಞವರ ತಲೆ ಅವರು ಟಾರು ರಸ್ತೆಗೆ ತಾಗಿ ಗಂಭೀರ ಗಾಯವಾಗಿತ್ತು . ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.