



ಕಾರ್ಕಳ : ಹಯಾತುಲ್ ಇಸ್ಲಾಂ ಅಸೋಸಿಯೇಷನ್ ಬಂಗ್ಲೆಗುಡ್ಡೆ , ಸರ್ ಹಿಂದ್ ಇಸ್ಲಾಮಿಕ್ ಅಕಾಡೆಮಿ ತ್ವೈಭಾ ಗಾರ್ಡನ್ ಬಂಗ್ಲೆಗುಡ್ಡೆ , ಇವುಗಳ ಜಂಟಿ ಆಶ್ರಯದಲ್ಲಿ ಆಶ್ರಯದಲ್ಲಿ ಎಲಾನೆ ಮಿಲಾದ್ ಕಾರ್ಯಕ್ರಮವು ಬಂಗ್ಲೆಗುಡ್ಡೆ ಸಲ್ಮಾನ್ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಿತು ಸಲ್ಮಾನ್ ಜುಮ್ಮಾ ಮಸೀದಿಯಿಂದ ಬಂಗ್ಲೆಗುಡ್ಡೆ ಜಂಕ್ಷನ್ ಮುಖಾಂತರ ಗೆಳೆಯರ ಬಳಗ ಮೈದಾನದ ವರೆಗೆ ಬ್ರಹತ್ ಎಲಾನೆ ಮಿಲಾದ್ ಜಾಥಾ ನಡೆಯಿತು ಈ ಸಂದರ್ಭದಲ್ಲಿ ಮಾತನಾಡಿದ ತ್ವೈಭಾ ಗಾರ್ಡನ್ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಕಿಲ್ಲೂರ್ ಇಸ್ಲಾಂ ಪ್ರತಿಪಾದಿಸಿದ ಶಿಕ್ಷಣದ ಮಹತ್ವ ,ಅವಶ್ಯಕತೆ, ಹಾಗೂ ಇಸ್ಲಾಂ ವಿರೋಧಿಸಿದ ಮಾದಕ ದ್ರವ್ಯಗಳ ದುಷ್ಪರಿಣಾಮಗಳು ಬಗ್ಗೆ ವಿವರಿಸಿ ದುಶ್ಚಟಗಳಿಂದ ದೂರವಿದ್ದು ತಂದೆ, ತಾಯಿ , ಗುರು ಹಿರಿಯರ ಮೇಲೆ ಗೌರವ ಭಾವನೆ ಹೊಂದುವುದು, ಸರ್ವಧರ್ಮಗಳೊಂದಿಗೆ ಸಹಬಾಳ್ವೆ , ಸಾಮರಸ್ಯದಿಂದ ಬದುಕುವಂತೆ ಕರೆ ನೀಡಿದರು ಈ ಸಂದರ್ಭದಲ್ಲಿ ತ್ವೈಭಾ ಗಾರ್ಡನ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್, ಹಾಯತುಲ್ ಇಸ್ಲಾಂ ಅಸೋಸಿಯೇಶನ್ ಮಾಜಿ ಅಧ್ಯಕ್ಷ ರಜಬ್ ಪರನಿರ್, ಹಸನ್ ಕೆ, ಮಾಜಿ ಉಪಾಧ್ಯಕ್ಷ ನೂರುದ್ದೀನ್, ಎಸ್ ವೈ ಎಸ್ ಮುಖಂಡರಾದ ದಾವೂದ್ ಪರ್ನೀರ್, ಮುಬೀನ್, ಮುನ್ನೀರ್, ಎಸ್ ಎಸ್ ಎಫ್ ಮುಖಂಡರಾದ ಅಲ್ತಾಫ್ ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.