



ಕಾರ್ಕಳ :ಯಕ್ಷರಂಗಾಯಣ ಮೂಲಕ ರಂಗಕಲೆ, ಯಕ್ಷಗಾನ ಚಟುವಟಿಕೆಗಳಿಗೆ ಪ್ರಯೋಗಭೂಮಿಕೆ ಯಾಗಲಿದೆ ಎಂದು ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ಹೇಳಿದರು ಅವರು ಕಾರ್ಕಳದಲ್ಲಿ ಕೋಟಿಚೆನ್ನಯ್ಯ ಥೀಂ ಪರ‍್ಕ್ ನಲ್ಲಿ ರಾಜ್ಯದ ಯಕ್ಷರಂಗಾಯಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವರು ಈಗಾಗಲೆ ಯಕ್ಷರಂಗಾಯಣಕ್ಕೆ ಮೂರು ಎಕರೆ ಜಾಗವನ್ನು ಮೀಸಲಿರಿಸಿ ಒಂದು ಕೋಟಿ ಅನುದಾನವನ್ನು ನೀಡಲಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಯಕ್ಷರಂಗಾಯಣಕ್ಕೆ ಅಧೀಕೃತವಾಗಿ ಚಾಲನೆ ಸಿಗಲಿದೆ ಎಂದರು..


.ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಮಾತನಾಡಿ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಹಾಗು ಯಕ್ಷರಂಗಾಯಣ ಇವು ಕಾರ್ಕಳದ ಇತಿಹಾಸದ ಹೊಸತನಕ್ಕೆ ಮೆರುಗು ನೀಡಲಿದೆ ಎಂದರು
ಖ್ಯಾತ ಯಕ್ಷಕಲಾವಿದ ರಘುನಾಥ್ ನಾಯಕ್ ಮಾತನಾಡಿ ಯಕ್ಷಗಾನ ಭಾಷೆ ಮಾತ್ರವಲ್ಲ ಹೃದಯಗಳನ್ನು ಬೆಸೆಯುತ್ತದೆ ಎಂದರು
ಹೆಲಿಕಾಪ್ಟರ್ ವಿಹಾರ ಉದ್ಘಾಟನೆ: ಹಿರಿಯ ಉದ್ಯಮಿ ಬೋಳ ಪ್ರಭಾಕರ್ ಕಾಮತ್ ದೀಪಬೆಳಗಿಸಿ ಹೆಲಿಕಾಪ್ಟರ್ ವಿಹಾರ ಉದ್ಘಾಟಿಸಿದರು. ಸಂದರ್ಭದಲ್ಲಿ ಸಚಿವ ಸುನೀಲ್ ಕುಮಾರ್ ,ಜಿಲ್ಲಾಧಿಕಾರಿ ಕೂರ್ಮರಾವ್ , ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಮಣಿರಾಜ್ ಶೆಟ್ಟಿ, ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಪ್ರಕಾಶ್ ಜಿ.ಟಿ ನಿಟ್ಟಾಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ , ,ಪುರಸಭ ಅಧ್ಯಕ್ಷೆ ಸುಮಾಕೇಶವ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಶಿವ ಪ್ರಸಾದ್ ಭಾಗವತಿಕೆಯ ಮೂಲಕ ಪ್ರಾರ್ಥಿಸಿದರು .ರವೀಂದ್ರ ಪೂಜಾರಿ ಸ್ವಾಗತಿಸಿದರು. ಹರೀಶ್ ನಾಯಕ್ ಕರ‍್ಯಕ್ರಮ ನಿರೂಪಿಸಿದರು . ಆಳ್ವಾಸ್ ರಂಗಸoಸ್ಥೆಯ ಜೀವನ್ ರಾಂ ಸುಳ್ಯ, ಪ್ರಾಸ್ತಾವಿಕ ಮಾತನಾಡಿದರು
ಹೆಲಿಕಾಪ್ಟರ್ ವಿಹಾರ ನಡೆಸಿದ ಸಚಿವರು : ಕಾರ್ಕಳ ಉತ್ಸವದ ಅಂಗವಾಗಿ ನಡೆದ ಹೆಲಿಕಾಪ್ಟರ್ ವಿಹಾರ ಉದ್ಘಾಟನೆ ನೆರವೇರಿಸಿದ ಬಳಿಕ ಸಚಿವರು ಕಾರ್ಕಳ ಪುರಸಭೆಯ ಐದು ಜನ ಪೌರಕಾರ್ಮಿಕರ ಜೊತೆ ಹೆಲಿಕಾಪ್ಟರ್ ವಿಹಾರ ನಡೆಸಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.