



ಕಾರ್ಕಳ: ಮಾರ್ಚ್ ೧೦ರಿಂದ ೨೦ರವರೆಗೆ ಕಾರ್ಕಳದಲ್ಲಿ ನಡೆಯುವ ಕಾರ್ಕಳ ಉತ್ಸವಕ್ಕೆ ಸಾವಿರಾರು ಮಂದಿ ಆಗಮಿಸುತ್ತಾರೆ. ಆ ಸಂದರ್ಭ ಉಂಟಾಗುವ ವಾಹನ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸುಮಾರು ೨೮ ಕಡೆಗಳಲ್ಲಿ ವಾಹನ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಈ ಸಮಿತಿಯಲ್ಲಿ ಬಹಳಷ್ಟು ಮಂದಿ ಸ್ವಯಂ ಸೇವಕರಿದ್ದು ವಾಹನಗಳನ್ನು ಪಾರ್ಕಿಂಗ್ ಮಡಲು ಅಹರ್ನಿಶಿ ಶ್ರಮಿಸಲಿದ್ದಾರೆ. ವಾಹನ ಪಾರ್ಕಿಂಗ್ ಮಾಡುವ ವಿವರಗಳು: ಬಾಹುಬಲಿ ಬೆಟ್ಟದ ಬಳಿ, ದಾನಶಾಲೆ ವಾಲಿಬಾಲ್ ಕೋರ್ಟ್ ಬಳಿ, ದಾನಶಾಲೆ ಬಳಿ ಮಠದ ಸ್ಥಳ, ಹನುಮಾನ್ ಪೆಟ್ರೋಲ್ ಬಂಕ್ ಬಳಿ, ಶಾಂಭವಿ ಮೋಟಾರ್‍ಸ್ ಬಳಿ, ಪದ್ಮಾವತಿ ದೇವಸ್ಥಾನದ ಬಳಿ, ಅನಂತ ಶಯನ ದೇವಸ್ಥಾನದ ಬಳಿ, ನಾಗರಬಾವಿ ಬಳಿ, ಭುವನೇಂದ್ರ ಹೈಸ್ಕೂಲ್ ಬಳಿ, ಬಂಟ್ಸ್ ಹಾಸ್ಟೆಲ್ ಬಳಿ (ಹಿಂದೆ, ಮುಂದೆ) ಮಥಾಯಸ್ ಕಂಪೌಂಡ್, ಇಂಡೇನ್ ಗ್ಯಾಸ್ ಬಳಿ, ಉಪಾಧ್ಯಾಯ ಬೆಟ್ಟು, ಕಟೀಲ್ ಹೋಟೆಲ್ ಬಳಿ ಭಟ್ಟರ ಜಾಗ, ಕಟೀಲ್ ಹೋಟೆಲ್ ಎದುರು, ಟೆಕ್ನೋ ಗ್ಯಾರೇಜ್ ಮಾರ್ಕೇಟ್ ರೋಡ್ ಬಳಿ, ದ್ವಾರಕಾ ಹೋಟೆಲ್ ಸ್ಥಳ, ಸರಕಾರಿ ಆಸ್ಪತ್ರೆಯ ಬಳಿ ಕೋಟೆಕಣಿ, ಹೋಟೆಲ್ ಮಹಾಲಸಾ ತೆಳ್ಳಾರು ರೋಡ್ ಬಳಿ, ಬೋರ್ಡ್‌ಶಾಲೆ, ಪಿಯು ಕಾಲೇಜು ಬಳಿ, ದಾನಶಾಲೆ ಅಮರ ಜ್ಯೋತಿ ಆಸ್ಪತ್ರೆ ರಸ್ತೆ, ಚತುರ್ಮುಖ ಬಸದಿ ಬಳಿ, ಬಾಹುಬಲಿ ಪ್ರವಚನ ಮಂದಿರ, ಕೆಳಗಿನ ಹಾಗೂ ಮೇಲಿನ ಬಸ್ ಸ್ಟ್ಯಾಂಡ್, ಓಸಿಯಾನಿಕ್ ಭುವನೇಂದ್ರ ಕಾಲೇಜು ಬಳಿ, ಕೋಟಿ ಚೆನ್ನಯ ಥೀಮ್ ಪಾರ್ಕ್ ಬಳಿ, ಎಸ್ ವಿ ಟಿ ಕಾಲೇಜು ಬಳಿ. ಕಾರ್ಕಳ ನಗರದ ಬಸ್ ಸ್ಟ್ಯಾಂಡ್‌ಗಳಿಗೆ ನಿತ್ಯ ಬರುತ್ತಿದ್ದ ಖಾಸಗಿ ಬಸ್‌ಗಳು ಮಾರ್ಚ್ ೧೮ರಿಂದ ೨೦ರವರೆಗೆ ಕಾರ್ಕಳ ಪುಲ್ಕೇರಿ ಬೈಪಾಸ್ ಬಳಿ ಇರುವ ವಿಶಾಲ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಮೂರು ದಿನಗಳಲ್ಲಿ ಆ ಬಸ್‌ಗಳು ನಗರ ಬಸ್‌ಸ್ಟಾಂಡ್‌ಗೆ ಬರಲು ಅವಕಾಶಗಳಿಲ್ಲ. ಈ ಮೂರುದಿನಗಳಲ್ಲಿ ಹೆಬ್ರಿ ಕಡೆಯಿಂದ ಬರುವ ವಾಹನಗಳು ಜನರನ್ನು ಬಂಡಿಮಠ ಬಸ್‌ಸ್ಟ್ಯಾಂಡ್‌ನಲ್ಲಿ ಇಳಿಸಿ ಎಸ್‌ವಿಟಿ ಬಳಿ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಾರ್ಕಳ ಗಾಂಧಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದ ಸಂದರ್ಭ ಅಲ್ಲಿರುವ ಮಂಜುನಾಥ ಪೈ ಸಭಾಭವನದ ಬಳಿಯ ಗದ್ದೆಯಲ್ಲಿ ವಾಹನ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.