



ಹೆಬ್ರಿ : ಕಾರ್ಕಳದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಚಿವ ಸುನೀಲ್ ಕುಮಾರ್ ಪರಿಕಲ್ಪನೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ನಡೆಯುವ ಉತ್ಸವ ನಮ್ಮೇಲ್ಲರ ಉತ್ಸವ. ಎಲ್ಲರೂ ಕೈಜೋಡಿಸಿ ಯಶಸ್ಸಿಗೆ ಸಹಕರಿಸಬೇಕಾಗಿದೆ. ಮಾರ್ಚ್ 12 ರಂದು ಹೆಬ್ರಿಯಲ್ಲಿ ನಡೆಯುವ ಸಾಂಸ್ಕೃತಿಕ ಸಂಭ್ರಮಕ್ಕೂ ಎಲ್ಲರ ವಿಶೇಷ ಸಹಕಾರ ಬೇಕಾಗಿದೆ ಎಂದು ಹೆಬ್ರಿ ತಹಶೀಲ್ಧಾರ್ ಹೇಳಿದರು.
ಅವರು ಸೋಮವಾರ ಹೆಬ್ರಿ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಕಾರ್ಕಳ ಉತ್ಸವದ ಬಗ್ಗೆ ನಡೆದ ಸಮಾಲೋಚನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಬ್ರಿಯಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು. ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಹೆಚ್ ಗುರುದಾಸ್ ಶೆಣೈ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಹೆಬ್ರಿ ಸಬ್ ಇನ್ಸ್ ಫೆಕ್ಟರ್ ಮಹೇಶ್, ವಲಯ ಅರಣ್ಯಾಧಿಕಾರಿ ಗೌರವ್, ಸ್ಥಳೀಯ ಪ್ರಮುಖರಾದ ಸತೀಶ್ ಪೈ, ಗಣ್ಯರು, ಜನಪ್ರತಿನಿಧಿಗಳು ಹಾಜರಿದ್ದರು. ಹೆಬ್ರಿಯಲ್ಲಿ ಕಾರ್ಯಕ್ರಮ : ಹೆಬ್ರಿಯಲ್ಲಿ ಮಾರ್ಚ್ 12 ರಂದು ಶನಿವಾರ ಸಂಜೆ 6 ಗಂಟೆಯಿಂದ ಹೆಬ್ರಿ ಬಸ್ ನಿಲ್ದಾಣ ವಠಾರದಲ್ಲಿ 8.45ರ ತನಕ ಸ್ವರ ನಿನಾದ್ ಕೊಲ್ಲಾಪುರ ಮಹಾರಾಷ್ಟ್ರ ತಂಡ ಪ್ರಸ್ತುತಪಡಿಸುವ ದೇಶಭಕ್ತಿ ಗೀತೆಗಳ ಜಾಗೋ ಹಿಂದುಸ್ತಾನಿ, ಮಾತನಾಡುವ ಗೊಂಬೆ ಮತ್ತು ನೆರಳಿನಾಟ ಹಾಗೂ ರಾತ್ರಿ 9 ಗಂಟೆಯಿಂದ 10.30 ರ ತನಕ ಬಲೆ ತೆಲಿಪಾಲೆ ತುಳು ಹಾಸ್ಯಮಯ ನಾಟಕ ಪ್ರದರ್ಶನ ಗೊಳ್ಳಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.