



ಕಾರ್ಕಳ :ಮಾ.10 ರಿಂದ ಮಾ.20ರವರೆಗೆ ನಡೆಯಲಿರುವ ಕಾರ್ಕಳ ಉತ್ಸವಕ್ಕೆ ಮಾ.10 ರಂದು ಚಾಲನೆ ದೊರೆಯಲಿದೆ . ಅದಕ್ಕಾಗಿ ಭರದ ಸಿದ್ದತೆಯು ನಡೆಯುತಿದ್ದು ಕಾರ್ಕಳ ನಗರವನ್ನು ಸಂಪೂರ್ಣವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ. ಮೈಸೂರು ಚಾಮುಂಡೇಶ್ವರಿ ವಿದ್ಯುತ್ ನಿಗಮ ಮಂಡಳಿಯ ಇಂಜಿನಿಯರ್ ಗಳು ಈಗಾಗಲೆ ಕಾರ್ಕಳದಲ್ಲಿ ಆಗಮಿಸಿ ಸಂಪೂರ್ಣ ವಿದ್ಯುತ್ ಅಲಂಕಾರದ ಉಸ್ತುವಾರಿ ನೋಡಿಕೊಳ್ಳುತಿದ್ದಾರೆ .ಮೈಸೂರು ದಸರದ ವಿದ್ಯುತ್ ಅಲಂಕಾರವನ್ನು ಗುತ್ತಿಗೆ ಪಡೆಯುವ ಹದಿಮೂರು ಗುತ್ತಿಗೆದಾರರು ನೂರು ಸಿಬ್ಬಂದಿಗಳ ಜೊತೆ ಅಲಂಕಾರ ಕಾಮಗಾರಿಯನ್ನು ಕೈಗೊಂಡಿದ್ದಾರೆ ಕಾರ್ಕಳ ಬೈಪಾಸ್ ನಿಂದ ತಾಲೂಕು ಆಫೀಸ್ ವರೆಗೆ ಬಂಗ್ಲೆಗುಡ್ಡೆಯಿAದ ಕಾರ್ಕಳ ಸ್ವರಾಜ್ ಮೈದಾನ ,ಕಾಬೆಟ್ಟು,ಬಂಡಿಮಠ,ದಾನಶಾಲೆ ಭುವನೇಂದ್ರ ಕಾಲೇಜು ರಸ್ತೆ, ಅನಂತಶಯನ ತೆಳ್ಳಾರು ಸೇತುವೆ ವರೆಗೆ ಈಗಾಗಲೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕಾರ್ಕಳ ವಿಧಾನ ಸಭಾ ವ್ಯಾಪ್ತಿಯ 20 ಕ್ಕೂ ಹೆಚ್ಚು ವೃತ್ತಗಳಿಗೆ ದೀಪಗಳ ಅಲಂಕಾರ ಮಾಡಲಾಗುತ್ತಿದೆ. ಪ್ರಮುಖ ರಸ್ತೆಗಳ ಡಾಮರೀಕರಣ: ಕಾರ್ಕಳದ ಪುರಸಭೆ ವ್ಯಾಪ್ತಿಯ ಅನಂತ ಶಯನದಿಂದ ಬಸ್ಟಾö್ಯಂಡ್ ಹಾಗು ಆನೆಕೆರೆ ಮುಖ್ಯರಸ್ತೆ ಡಾಮರೀಕರಣಕ್ಕಾಗಿ ಎಸ್.ಎಫ್.ಸಿ ವಿಶೇಷ ಅನುದಾನ 65 ಲಕ್ಷ ರೂ ವೆಚ್ಚದಲ್ಲಿ ಡಾಮರೀಕರಣ ನಡೆಸಲಾಗುತ್ತಿದೆ . ಇತರ ರಸ್ತೆಗಳಿಗೆ ವಾರಾಹಿ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಕಿತ್ತುಹೋದ ರಸ್ತೆಗಳಿಗೆ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಡಾಮರೀಕರಣ ನಡೆಯುತಿದ್ದು ಅಂತಿಮ ಹಂತದಲ್ಲಿದೆ. ಕಾರ್ಕಳದ ಬಂಗ್ಲೆಗುಡ್ಡೆ ಸರ್ಕಲ್ ಸೇರಿದಂತೆ ನಗರದ ಎಲ್ಲಾ ಸರ್ಕಲ್ ಗಳಿಗೆ ಹಾಗು ಮುಖ್ಯ ರಸ್ತೆಗಳ ಬದಿಯ ಗೋಡೆಗಳಿಗೆ ಕಾರ್ಕಳ ಉತ್ಸವಕ್ಕೆ ಸ್ವಾಗತ ಕೋರುವ ವರ‍್ಲಿ ಚಿತ್ರಗಳನ್ನು ರಚಿಸಲಾಗಿದ್ದು ಕಲೆ ಸಂಸ್ಕೃತಿಯ ಸಾರಲು ಕಾರ್ಕಳ ನಗರ ಸಜ್ಜಾಗಿದೆ .
ಕಾರ್ಕಳ ಉತ್ಸವಕ್ಕೆ ಸ್ವಾಗತ ಕೋರಲು ಬೃಹತ್ ಗಾತ್ರದ 16 ಪ್ರವೇಶ ದ್ವಾರಗಳನ್ನು ನರ‍್ಮಿಸುತಿದ್ದು ಕಾರ್ಕಳ ವಿಧಾನ ಸಭಾ ವ್ಯಾಪ್ತಿಯ 51 ಕಡೆಗಳಲ್ಲಿ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗುತ್ತಿದೆ . ಪುರಸಭೆಯ ಮುಖ್ಯ ರಸ್ತೆಗಳ ಎರಡು ಬದಿಗಳಲ್ಲಿಯು ಕಾರ್ಕಳ ಉತ್ಸವದ ಬಂಟಿಂಗ್ಸ್ ,ಕಟೌಟ್ ಗಳು ರಾರಾಜಿಸುತ್ತಿವೆ.ಉತ್ಸವ ನಡೆಯುವ ಸ್ವರಾಜ್ ಮೈದಾನ ,ಗಾಂಧಿಮೈದಾನ ,ಭುವನೇಂದ್ರ ಕಾಲೇಜು ಪರಿಸರ, ಕೋಟಿಚೆನ್ನಯ್ಯ ಥೀಂ ಪಾರ್ಕ್ ಆವರಣಗಳಲ್ಲಿ ಈಗಾಗಲೆ ಪೆಂಡಾಲ್ ಅಳವಡಿಕೆ ಕಾರ‍್ಯ ವೇಗ ಪಡೆಯುತ್ತಿದೆ. ಹೆಲಿಕಾಪ್ಟರ್ ವಿಹಾರಕ್ಕಾಗಿ ಕಾರ್ಕಳ ತಾಲೂಕು ಮೈದಾನದಲ್ಲಿ ಹೆಲಪ್ಯಾಡ್ ನಿರ್ಮಾಣ ಮಾಡಲಾಗಿದೆ.ಅದಕ್ಕಾಗಿ ಮುಂಗಡ ಬುಕ್ಕಿಂಗ್ ಆರಂಭಿಸಲಾಗಿದೆ. ಗಣ್ಯಾತಿಗಣ್ಯರ ಆಗಮನ : ಕಾರ್ಕಳಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ,ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ.
ಕಾರ್ಯಾಲಯ ಉಧ್ಘಾಟನೆ : ಕಾರ್ಕಳ ಉತ್ಸವದ ಅಂಗವಾಗಿ ಕಾರ‍್ಯಾಲಯ ಶುಭಾರಂಭಗೊAಡಿದೆ . ಈ ಕಾರ್ಯಾಲಯ ದಲ್ಲಿ 30 ಜನರ ತ0ಡವು ಕಾರ‍್ಯನಿರ್ವಹಿಸಲಿದೆ



ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.