



ಕಾರ್ಕಳ: ಕಾರ್ಕಳ ಉತ್ಸವದ ಪೂರ್ವಾಭಾವಿ ಸಭೆ ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಸುನೀಲ್ ಕುಮಾರ್ ಕಾರ್ಕಳ ಉತ್ಸವದಲ್ಲಿ ಅನೇಕ ರಾಜ್ಯಗಳ ಸಂಸ್ಕೃತಿಯನ್ನು ಪರಿಚಯಿಸುವ ಸಲುವಾಗಿ ನಮ್ಮುರಿನ ಪ್ರವಾಸಿತಾಣಗಳ ಮಾಹಿತಿ ರಾಜ್ಯ ರಾಷ್ಟ್ರ ಮಟ್ಟಕ್ಕೆ ತಿಳಿಯುವಂತಾಗಬೇಕು , , ಮಾನಸಿಕ ವಾಗಿ ಸದೃಡತೆಗೆ .ಮಾನಸಿಕ ಸ್ಥೈರ್ಯ ಕೊಡುವ ಸಾಮಾಜಿಕ , ಸಂಸ್ಕೃತಿಯ ಪರಿಚಯ ನೀಡುವ ಕಾರ್ಯಕ್ರಮ ವಾಗಲಿದೆ. ಖ್ಯಾತ ಸಾಹಿತಿ ಮುದ್ದಣ, ವೀರಪ್ಪಮೊಯಿಲಿ ,ಕಲೆಯಲ್ಲಿ ರೆಂಜಾಳ ಗೋಪಾಲಕೃಷ್ಣ ಶೆಣೈ ಯವರನ್ನು ನೀಡಿದ ತಾಲೂಕಾಗಿದ್ದು ಸಾಹಿತ್ಯ ಸಂಸ್ಕೃತಿ ಜೈನ ಪರಂಪರೆಯ ಸಾಂಸ್ಕೃತಿಕ ಇತಿಹಾಸ ಬಿಂಬಿಸುತ್ತದೆ ಸಂದರ್ಭದಲ್ಲಿ ತಾಲೂಕಿನ ಶಿಕ್ಷಕರಿಗೆ ಒಒಡಿ ಸೌಲಭ್ಯ ನೀಡುವ ಬಗ್ಗೆ ಗಮನಹರಿಸಲಾಗುವುದು, ಕಾರ್ಕಳ ಉತ್ಸವ ದಲ್ಲಿ ಏನಿರಲಿದೆ? ಕಾರ್ಕಳ ಉತ್ಸವದಲ್ಲಿ 150 ಕಲಾ ತಂಡ ಕಾರ್ಕಳ ಉತ್ಸವದಲ್ಲಿ ಪಾಲ್ಗೊಳ್ಳಲಿವೆ. 9 ದಿನಗಳ ಕಾಲ ಕನ್ನಡ, ತುಳು, ಕೊಂಕಣಿಯ ಎಲ್ಲ ಪ್ರಕಾರದ ನಾಟಕ, ನೃತ್ಯ, ಸಂಗೀತ ನಡೆಯಲಿದೆ.ಮುಂಬೈ ಯಿಂದ ಗಾಳಿಪಟ ಬರಲಿವೆ. ಗೂಡುದೀಪ ಉತ್ಸವ ನಡೆಯಲಿದೆ. ಡಿ. 20 ರಿಂದ 24ರವರೆಗೆ ಹೆಲಿಕಾಪ್ಟರ್ ಉತ್ಸವವಿದೆ.ತುಳುನಾಡಿನ ವೈಭವ ಸಾರುವ ಮಳಿಗೆಗಳು ಕಾಶ್ಮೀರ, ರಾಜಸ್ಥಾನ, ತಮಿಳುನಾಡು, ಕೇರಳದಿಂದ ವಸ್ತುಪ್ರದರ್ಶನ ಮಳಿಗೆಗಳು ಆಗಮಿಸಲಿವೆ,ಚಿತ್ರ ಕಲೆ, ವಿದ್ಯಾರ್ಥಿಗಳ ಅನುಕೂಲತೆಗಾಗಿ ವಿಜ್ಞಾನ ಮೇಳ, ವೆಜ್, ನಾನ್ ವೆಜ್ ಆಹಾರೋತ್ಸವ ಮಳಿಗೆಗಳಿರಲಿವೆ ಎಂದು ಸಚಿವರು ತಿಳಿಸಿದರು.
ಮುಖ್ಯ ಅತಿಥಿ ಯಾಗಿ ಅಜೆಕಾರು ಪದ್ಮಾ ಗೋಪಾಲ್ ಸಂಸ್ಥೆಯ ಸುಧಾಕರ್ ಶೆಟ್ಟಿ , ಮಾತನಾಡಿ ಸಾಹಿತ್ಯ ಸಂಸ್ಕೃತಿ ಬಿಂಬಿಸಲು ಮಾನಸಿಕ ಸಮಸ್ಯೆ ಗಳಿಂದ ಹೊರಬರಲು ಊರಿನ ಉತ್ಸವಗಳು ಅಗತ್ಯ ಎಂದರು
ಸಭೆಯಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ!ಜಗದೀಶ್ ಪೈ ಮಾತನಾಡಿ ಉತ್ಸಾಹದಿಂದ ಉತ್ಸವವಾಗಬೇಕು ,ಅದೆ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುತ್ತದೆ ಎಂದರು
ಇದೇ ಸಂದರ್ಭದಲ್ಲಿ ಕಾರ್ಕಳ ಉತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ನಿವೃತ್ತ ಶಿಕ್ಷಕ ವಿಠಲ ಬೇಲಾಡಿ ,ಮೊಗೆರ್ಕಳ ಸಂಘದ ಹರೀಶ್ ಕಾಬೆಟ್ಟು , ಕಂಬಳ ಅಕಾಡೆಮಿ ಗೌರವಾದ್ಯಕ್ಷ ಗುಣ ಪಾಲ ಕಡಂಬ , ಸಂಜೀವ ಜೊಗಿ , ಎಸ್.ವಿ.ಟಿ ಶಿಕ್ಷಣ ಸಂಸ್ಥೆಯ ಕೆ.ಪಿ ಶೆಣೈ, ಅಡಪಾಡಿಕೊಡಿ ದೇವಸ್ಥಾನದ ಮೊಕ್ತೆಸರ ಪುಂಡಲೀಕ ನಾಯಕ್ ಉಪಸ್ಥಿತರಿದ್ದರು,ದೇವದಾಸ್ ಕೆರೆಮನೆ ,ಪ್ರಭಾಕರ್ ಕೊಂಡಳ್ಳಿ ಕಾರ್ಯಕ್ರಮ ನಿರ್ವಹಿಸಿದರು,.ಮುನಿರಾಜ ರೆಂಜಳ ದನ್ಯವಾದ ವಿತ್ತರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.