



ಪೂಜಾ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಕಾರ್ಕಳ: ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಷ್ಟೇ ವ್ಯವಸ್ಥೆಯನ್ನು ಹೊಂದಿದ್ದು ಇವುಗಳು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ ಉಡುಪಿಯು ಪ್ರಥಮ ಸ್ಥಾನವನ್ನು ಹೊಂದಿದೆ. ಅವಳಿ ತಾಲೂಕಿನಲ್ಲಿರುವ ಸರಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಹೊಂದಿದ್ದು ಈಗ ಸರಕಾರಿ ಶಾಲೆ ಖಾಸಗಿ ಶಾಲೆಗಳಷ್ಟೇ ಅಭಿವೃದ್ಧಿಯನ್ನು ಹೊಂದಿದೆ ಮತ್ತು ಉತ್ತಮ ವ್ಯವಸ್ಥೆಯನ್ನು ಕೂಡ ಒಳಗೊಂಡಿದೆ
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗುತ್ತಾ ಇದೆ. ಇದಕ್ಕೆ ಹಲವಾರು ಕಾರಣಗಳಿದ್ದು ಪ್ರಮುಖವಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಮೇಲಿನ ಒಲವು ಪೋಷಕರು ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಉತ್ತಮ ಶಿಕ್ಷಣವನ್ನು ನೀಡಬೇಕೆಂದು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ ಈ ರೀತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. , ಸಣ್ಣ ಪುಟ್ಟ ತರಗತಿಗಳಿಗೆ ಮುಖ್ಯೋಪಾಧ್ಯಾಯರು ಪಾಠ ಮಾಡುತ್ತಾರೆ ದೊಡ್ಡ ದೊಡ್ಡ ತರಗತಿಗಳಿಗೆ ಅತಿಥಿ ಉಪನ್ಯಾಸಕರು ಪಾಠ ಮಾಡುವಂಥ ಪರಿಸ್ಥಿತಿ ಬಂದಿದೆ. ಈ ಸರಕಾರಿ ಶಾಲೆಗಳಿಗೆ ಸರಕಾರಿ ಶಿಕ್ಷಕರನ್ನು ನೇಮಿಸುವುದು ತುಂಬಾ ಅಗತ್ಯವಾಗಿದೆ ಬಡ ಮಕ್ಕಳಿಗೆ ಯಾವುದೇ ಸೌಕರ್ಯಗಳು ದೊರೆಯದಿರುವುದು, ಸೌಲಭ್ಯಗಳ ಕೊರತೆ, ಮೂಲ ಸೌಕರ್ಯಗಳ ಕೊರತೆ ಹಾಗೂ ಕೊಠಡಿಗಳ ದುರಸ್ತಿಗಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸದಿರುವುದರಿಂದ ಸರ್ಕಾರಿ ಶಾಲೆಗಳಿಗೂ ಕುಸಿತಕ್ಕೆ ಕೂಡ ಕಾರಣವಾಗುತ್ತಿದೆ. ಕಾರ್ಕಳ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳ ನಡುವೆ ಸ್ಪರ್ಧೆ ಪಟ್ಟಿದೆ ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು 2021 -22ರಲ್ಲಿ 12602 ಇದ್ದು 2022 23ರಲ್ಲಿ 12542 ಹಾಗೂ 2023 24ರಲ್ಲಿ 12887 ಅಷ್ಟರ ಮಟ್ಟಿಗೆ ಏರಿಕೆಯಾಗಿದೆ ಹಾಗೆಯೇ ಖಾಸಗಿ ಶಾಲೆಗಳಲ್ಲಿ 2021 22 ರಲ್ಲಿ 12206 ಮತ್ತು 2022 23 ರಲ್ಲಿ 12383 ಹಾಗೆಯೇ 2023 24ರಲ್ಲಿ 12418 ರಷ್ಟಿದೆ ಹಾಗೆಯೇ ಅನುದಾನಿತ ಶಾಲೆಗಳಲ್ಲಿ 2021 22 ರಲ್ಲಿ 3618 ಮತ್ತು 2022 23ರಲ್ಲಿ 3671 ಹಾಗೂ 2023 24ರಲ್ಲಿ 3417ರಷ್ಟು ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮೂರು ಶಾಲೆಗಳು ಮುಚ್ಚಿದೆ ಕಾರ್ಕಳ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬ ರಾಡಿ ಬೋಳ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಬೆಟ್ಟು ಸೂಡ ಮತ್ತು ಹೆಬ್ರಿ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಂಗಾರುಗುಡ್ಡೆ ಇಷ್ಟು ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿವೆ ಇದರಿಂದಾಗಿ ಸರಕಾರಿ ಶಾಲೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಸರ್ಕಾರಿ ಶಾಲೆಗಳು ಉಳಿಸಬೇಕು ಎಂಬ ಘೋಷವಾಕ್ಯಗಳು ಕೇಳಿ ಬರುತ್ತಿವೆ ಆದರೆ ವಾಸ್ತವದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳನ್ನು ಗಮನಿಸಿದರೆ ನಿಜಕ್ಕೂ ಪರಿಸ್ಥಿತಿ ಆಯೋಮಯವಾಗಿದೆ. ಸರ್ಕಾರಿ ಶಾಲೆಗಳಿಗೆ ಬರುವುದು ಬಡವರ ಮಕ್ಕಳು ಅದಕ್ಕಾಗಿ ಅಗತ್ಯಮೂಲ್ಯ ಸೌಕರ್ಯಗಳ ಹಾಗೂ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರವು ಕೊಡಬೇಕಾಗಿದೆ ಖಾಸಗಿ ಶಾಲೆಗಳಿಗೆ ಕೊಡುವಷ್ಟು ಪ್ರಾಶಸ್ತ್ಯ ಸರಕಾರಿ ಶಾಲೆಗಳಿಗೂ ಕೊಟ್ಟರೆ ಹಾಗೂ ಎಲ್ಲ ಮೂಲಸೌಕರ್ಯಗಳನ್ನು ಕೊಡುವುದರಿಂದ ಸರಕಾರಿ ಶಾಲೆಗಳು ಉಳಿವಿಗೆ ಕಾರಣವಾಗಬಹುದು. ಗ್ರಾಮೀಣ ಪ್ರದೇಶದ ಮಕ್ಕಳ ಮಾನಸಿಕ ಸ್ಥಿತಿಯನ್ನು ಬದಲಾಯಿಸಿ ಶಿಕ್ಷಣವನ್ನು ಪಡೆಯುವಂತೆ ಪ್ರೋತ್ಸಾಹಿಸಬೇಕು. ಇರುವ ಆರ್ಥಿಕ ಸಮಸ್ಯೆಯನ್ನು ದೂರಗೊಳಿಸಿ ಅವರು ಶಿಕ್ಷಣವನ್ನು ಪಡೆಯುವಂತೆ ಮಾಡುವುದರಿಂದ ಸರಕಾರಿ ಶಾಲೆಗಳ ಉಳಿವು ಸಾಧ್ಯ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.