



ಕಾರ್ಕಳ: ಸಂಪತ್ತು ಗಳಿಸಿದರೆ ಮಾತ್ರ ಸಾಲದು ಕಷ್ಟದಿಂದ ಗಳಿಸಿದ ಸಂಪತ್ತು ಸದ್ಬಳಕೆಯಾಗಬೇಕು.ನಮ್ಮ ಸಂಪತ್ತು ಬಡವರು ಮತ್ತು ಅಶಕ್ತರ ಆಸರೆಯಾಗಬೇಕು. ನಮ್ಮ ಸಂಪತ್ತು ಬೇರೆಯವರ ಕಷ್ಟಗಳಿಗೆ ಉಪಯೋಗವಾದರೆ ಪುಣ್ಯ ಮತ್ತು ಸಂತೋಷ ಸಿಗುತ್ತದೆ. ಹಂಚಿ ತಿನ್ನುವುದರಿಂದ ಸಿಗುವ ಸಂತೋಷ ಒಬ್ಬರೇ ಆಸ್ವಾದಿಸುವುದರಲ್ಲಿ ಇರುವುದಿಲ್ಲ ಎಂದು ಬಿಲ್ಲವ ಸಮಾಜ ಸೇವಾ ಸಂಘ ಕಾರ್ಕಳ ಇದರ ಅಧ್ಯಕ್ಷ ಡಿ ಆರ್ ರಾಜು ತಿಳಿಸಿದರು ಅವರು ಕಾರ್ಕಳ ಎಸ್ ಜೆ ಆರ್ಕೇಡ್ ನ ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ನಲ್ಲಿ ಕಿವಿ ಮತ್ತು ಮಾತಾಡುವ ಸಮಸ್ಯೆ ಇರುವ ವಿಧ್ಯಾರ್ಥಿನಿಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಹೊಲಿಗೆ ಯಂತ್ರವನ್ನು ಹಸ್ತಾಂತರಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಮೊಹಮ್ಮದ್ ಶರೀಫ್, ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ನ ಮುಖ್ಯಸ್ಥೆ ಸಾಧನ ಜಿ ಆಶ್ರಿತ್, ಅರುಣೋದಯ ವಿಶೇಷ ಶಾಲೆಯ ಶಿಕ್ಷಕ ಗಿರೀಶ್ ಆಶ್ರೀತ್ ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.