



ಕಾರ್ಕಳ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಹಾಗೂ ಸರಕಾರಿ ಪ್ರೌಢ ಶಾಲೆ ಕೂಡಬೆಟ್ಟು, ಮಾಳ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಬಾಲಕ ಬಾಲಕಿಯರ ಕಾರ್ಕಳ ತಾಲೂಕು ಮಟ್ಟದ ಕ್ರೀಡಾಕೂಟವು ಅ.6-7 ರಂದು ಸರಕಾರಿ ಪ್ರೌಢ ಶಾಲೆ ಕೂಡಬೆಟ್ಟು, ಮಾಳದಲ್ಲಿ ನಡೆಯಿತು.
ಕ್ರೀಡಾಕೂಟದಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ವಯೋಮಾನ ೧೪ರ ವಿಭಾಗದಲ್ಲಿ ಚೈತ್ರಾ (೮ನೇ ತರಗತಿ) ೧೦೦ ಮೀಟರ್ ಓಟ ಮತ್ತು ಉದ್ದ ಜಿಗಿತ ಸ್ಪರ್ಧೆಯಲ್ಲಿ ಚಿನ್ನದ ಪದಕ, ಭವಿಷ್ ನಾಯಕ್ (೮ನೇ ತರಗತಿ) ಚಕ್ರ ಎಸೆತದಲ್ಲಿ ಚಿನ್ನದ ಪದಕ ಮತ್ತು ಗುಂಡು ಎಸೆತದಲ್ಲಿ ಬೆಳ್ಳಿಯ ಪದಕ, ಸಾಕ್ಷಿ ಶೆಟ್ಟಿ (೮ನೇ ತರಗತಿ) ಗುಂಡು ಎಸೆತ ಮತ್ತು ಚಕ್ರ ಎಸೆತದಲ್ಲಿ ಚಿನ್ನದ ಪದಕ, ವಯೋಮಾನ ೧೭ರ ವಿಭಾಗದಲ್ಲಿ ಪ್ರಾಪ್ತಿ ಶೆಟ್ಟಿ (೯ನೇ ತರಗತಿ) ಗುಂಡು ಎಸೆತದಲ್ಲಿ ಚಿನ್ನದ ಪದಕ ಮತ್ತು ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ, ಆರುಷ್ ವಿವನ್ ಅರನ್ಹಾ (೯ನೇ ತರಗತಿ) ಉದ್ದ ಜಿಗಿತದಲ್ಲಿ ಬೆಳ್ಳಿಯ ಪದಕ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ವಯೋಮಾನ ೧೪ರ ವಿಭಾಗದಲ್ಲಿ ಸನತ್ ಪ್ರಭು(೮ನೇ ತರಗತಿ) ೧೦೦ ಮೀಟರ್ ಓಟದಲ್ಲಿ ಕಂಚಿನ ಪದಕ ಮತ್ತು ಉದ್ದ ಜಿಗಿತದಲ್ಲಿ ಬೆಳ್ಳಿಯ ಪದಕ, ಮೊಹಮ್ಮದ್ ಮುಫೇಜ್ ನಾಝೀರ್ (೮ನೇ ತರಗತಿ) ೮೦ಮೀಟರ್ ಹರ್ಡಲ್ಸ್ನಲ್ಲಿ ಬೆಳ್ಳಿಯ ಪದಕ, ಆಪ್ತ ಜೈನ್ (೮ನೇ ತರಗತಿ) ೨೦೦ ಮೀಟರ್ ಓಟದಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ.
ಬಾಲಕರ ೪*೧೦೦ ಮೀಟರ್ ರಿಲೇ ಸ್ಪರ್ಧೆಯಲ್ಲಿ ೮ನೇ ತರಗತಿ ವಿದ್ಯಾರ್ಥಿಗಳಾದ (ಸನತ್ ಪ್ರಭು, ಮೊಹಮ್ಮದ್ ಮುಫೇಜ್ ನಾಝೀರ್, ಆಶೀಶ್ ಎನ್ ನಾಯಕ್, ಗಗನ್ ಜಿ) ಮತ್ತು ಬಾಲಕಿಯರ ವಿಭಾಗದಲ್ಲಿ ೮ನೇ ತರಗತಿ ವಿದ್ಯಾರ್ಥಿಗಳಾದ (ಆಪ್ತ ಜೈನ್, ಚೈತ್ರಾ, ರಿತಿಕಾ ಶೆಟ್ಟಿ, ಸಾನ್ವಿ ಎಸ್ ಶೆಟ್ಟಿ) ಬೆಳ್ಳಿಯ ಪದಕ ಪಡೆದಿರುತ್ತಾರೆ. ವಯೋಮಾನ ೧೪ರ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ೨೦೨೩ರ ಟೀಮ್ ಚಾಂಪಿಯನ್ ಶಿಪ್ ಪ್ರಶಸ್ತಿ ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆ & ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಶಾಲೆಗೆ ಉತ್ತಮ ಪಥಸಂಚಲನ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಸಾಧಕ ವಿದ್ಯಾರ್ಥಿಗಳಿಗೆ ಅಜೆಕಾರು ಪದ್ಮಗೋಪಾಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿ, ಶುಭ ಹಾರೈಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.