



ಕಾರ್ಕಳ: ಸಹೋದ್ಯೋಗಿಗಳಿಗೆ ಕಿರುಕುಳ ನೀಡಿದ ವಿಚಾರವಾಗಿ SLRM ಮೇಲ್ವಿಚಾರಕಿ ಹಾಗೂ ಮುಡಾರು ಗ್ರಾಮಪಂಚಾಯತ್ ಪಿಡಿಒ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಲ್ಲೂರು ನಿವಾಸಿ ಶ್ರೀಮತಿ ಗಿರಿಜಾ (35) ದೂರು ನೀಡಿದವರು.
ಗಿರಿಜಾರವರು ನಲ್ಲೂರು ಗ್ರಾಮದ ಪ್ರತಿಮಾ, ಸರಿತಾ ಹಾಗೂ ಸುಧೀರ್ ರವರೊಂದಿಗೆ ಮುಡಾರು ಗ್ರಾಮ ಪಂಚಾಯತ್ ಗೆ ಸಂಬಂಧಿಸಿದ SLRM ಘಟಕದಲ್ಲಿ ಕಸ ವಿಲೇವಾರಿ ಕೆಲಸ ಮಾಡಿಕೊಂಡಿದ್ದು, ಕಸವಿಲೇವಾರಿ ಕೆಲಸದ ಬಗ್ಗೆ ಮುಡಾರು ಗ್ರಾಮ ಪಂಚಾಯತ್ ನ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಮೇಶ ಹಾಗೂ ಎಸ್,ಎಲ್,ಆರ್,ಎಮ್ ಘಟಕದ ಮೇಲ್ವಿಚಾರಕಿ ಶ್ರೀಮತಿ ಮಾಧವಿ ವಿನಾಕಾರಣ ಗಿರಿಜಾ ಹಾಗೂ ಅವರ ಸಹೋದ್ಯೋಗಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಿರಿಜಾರವರು ಸಂಸಾರವನ್ನು ಸಾಕುವ ಉದ್ದೇಶದಿಂದ ಇದನ್ನೆಲ್ಲಾ ತಡೆದುಕೊಂಡಿದ್ದು, ಕಳೆದ ಎರಡು ಮೂರು ಮೀಟಿಂಗುಗಳಲ್ಲಿ ಸಾರ್ವಜನಿಕರು ಹಾಗೂ ಪಂಚಾಯತ್ ಸದಸ್ಯರ ಸಮಕ್ಷಮದಲ್ಲಿ ಉದ್ಯೋಗದ ಬಗ್ಗೆ ಅತ್ರಪ್ತಿ ವ್ಯಕ್ತಪಡಿಸಿ ಅವಹೇಳನ ಮಾಡಿದ್ದು ಅಲ್ಲದೇ ದಿನಾಂಕ 31 ರಂದು ಬೆಳಿಗ್ಗೆ 11:45 ಗಂಟೆಗೆ ಎಸ್,ಎಲ್,ಆರ್,ಎಮ್ ಘಟಕದ ಮೀಟಿಂಗ್ ಕರೆದು ಆರೋಪಿಗಳಿಬ್ಬರೂ ಸೇರಿ ಗಿರಿಜಾ ಹಾಗೂ ಉಳಿದ ಮೂವರಿಗೆ ನೀವು 04 ಜನ ಸರಿಯಾಗಿ ಕಸ ಮತ್ತು ಗಲೀಜು ವಸ್ತುಗಳನ್ನು ವಿಲೇವಾರಿ ಮಾಡುತ್ತಿಲ್ಲ ಎಂದು ನಿಂದನೆ ಮಾಡಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.