



ಕಾರ್ಕಳ: ಬೆಳ್ಮಣ್ಣು ಸರಕಾರಿ ಪದವಿಪೂರ್ವ ಕಾಲೇಜಿನ ABVP ಘಟಕದ ಉದ್ಘಾಟನೆಯು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಡುಪಿ ಜಿಲ್ಲಾಸಹಪ್ರಮುಖ್ ದಯಾನಂದ್ ಬಾಯರ್ ಮಾತನಾಡಿ ವಿದ್ಯಾರ್ಥಿ ಪರಿಷತ್ ಎಂದೂ ರಾಜ್ಯರಾಜಕಾರಣ ಮಾಡಿಲ್ಲ ಮಾಡುವುದೂ ಇಲ್ಲ ಆದರೆ ರಾಷ್ಟ್ರರಾಜಕಾರಣ ಮಾಡುತ್ತದೆ. ರಾಷ್ಟ್ರದ ಪರ ಯಾರು ಇದ್ದಾರೆಯೋ ಅವರ ಜೊತೆ ವಿದ್ಯಾರ್ಥಿ ಪರಿಷತ್ ಇದೆ ಎಂದರು. ನಂತರದಲ್ಲಿ ಕಾರ್ಕಳ ನಗರ ಅಧ್ಯಕ್ಷರಾದ ಅಭಿಷೇಕ್ ಸುವರ್ಣ ಅವರು ಜವಾಬ್ದಾರಿ ಘೋಷಣೆ ಮಾಡಿದರು. ಅಧ್ಯಕ್ಷರಾಗಿ ಕಾರ್ತಿಕ್, ಕಾರ್ಯದರ್ಶಿಯಾಗಿ ಸುಶಾನ್ ಆಯ್ಕೆಯಾದರು. ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಸಂಚಾಲಕ ಕಾಬೆಟ್ಟು ಮನೀಶ್ ಕುಲಾಲ್, ಸಹಸಂಚಾಲಕ ಶಿವರುದ್ರ ಪಾಟೀಲ್, ರಾಜ್ಯಕಾರ್ಯಕಾರಿಣಿ ಸದಸ್ಯ ಯುಕೇಶ್ ಇಂದಬೆಟ್ಟು, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಕಾಂತಿಶ್ರೀ ಶೆಣೈ, ನಗರ ಕಾರ್ಯದರ್ಶಿ ಸುಮಂತ್ ಶೆಟ್ಟಿ, ಸಹಕಾರ್ಯದರ್ಶಿ ಸುಮಂತ್ ಪೂಜಾರಿ, ಹಾಗೂ ಪ್ರಮುಖ ಕಾರ್ಯಕರ್ತರಾದ ನಿರಂಜನ್ ನಾಯಕ್, ಗೌತಮ್, ಅನ್ವಿತಾ ಶರ್ಮ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.