logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ: ಹೊಟೇಲ್ ಮಯೂರ ಇಂಟರ್ ನ್ಯಾಶನಲ್ ಉದ್ಘಾಟನೆ

ಟ್ರೆಂಡಿಂಗ್
share whatsappshare facebookshare telegram
3 Sept 2022
post image

ಕಾರ್ಕಳ: ಕಾರ್ಕಳ ಕುದುರೆಮುಖ ರಸ್ತೆಯಲ್ಲಿ ಪುಲ್ಕೇರಿಯ ಬೈಪಾಸ್ ಬಳಿ ನೂತನವಾಗಿ ನಿರ್ಮಿಸಿದ ವಸತಿ ಗೃಹ, ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಲಲಿತಾ ಸಭಾಂಗಣವನ್ನೊಳಗೊಂಡ ಹೊಟೇಲ್ ಮಯೂರ ಇಂಟರ್ ನ್ಯಾಶನಲ್ ನ ಉದ್ಘಾಟನೆ ಶುಕ್ರವಾರ ನಡೆಯಿತು.

ನಲ್ಲೂರು ಪರವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ, ಉದ್ಯಮಿ ಹುರ್ಲಾಡಿ ರಘುವೀರ್ ಎ. ಶೆಟ್ಟಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿ, ಸಮಾಜ ಸೇವೆಯೊಂದಿಗೆ ಉದ್ಯಮದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ದೇವರ ಅನುಗ್ರಹ ಲಭ್ಯವಾಗಿ ಯಶಸ್ವಿಯಾಗುತ್ತದೆ. ಅದರಂತೆ ಈ ಸಂಸ್ಥೆ ಯಶಸ್ವಿಯಾಗಲಿ ಎಂದು ಹಾರೈಸಿದರು.

ರಾಷ್ಟ್ರೀಯ ಮಹಿಳಾ ಆಯೋಗದ ನಿಕಟ ಪೂರ್ವ ಸದಸ್ಯೆ ಶ್ಯಾಮಲಾ ಎಸ್. ಕುಂದರ್, ಎಸ್ ಸಿಡಿಸಿಸಿ ಬ್ಯಾಂಕ್ ನ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್, ಕರ್ನಾಟಕ ಸ್ಟೇಟ್ ಫೆಡರೇಶನ್ ಕರ್ನಾಟಕ ರಾಜ್ಯ ಕ್ವಾರಿ ಸ್ಟೋನ್ ಕ್ರಷರ್ ಮಾಲಕರ ಸಂಘದ ಅಧ್ಯಕ್ಷ ಡಾ|ರವೀಂದ್ರ ಶೆಟ್ಟಿ ಬಜಗೋಳಿ ಶುಭಾಶಂಸನೆಗೈದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಲಲಿತಾ ಸಾಲಿಯನ್ ಅಜ್ಜಾಡಿ, ನವಿ ಮುಂಬಯಿ, ಶ್ರೀ ಮೂಕಾಂಬಿಕಾ ಕ್ಷೇತ್ರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಮುಂಬಯಿ ಪೊವೈಯ ಹೊಟೇಲ್ ಲಕ್ಷ್ಮೀ ಯ ಮಾಲಕ ಅಪ್ಪಣ್ಣ ಶೆಟ್ಟಿ ಜೋಗಿ ಬೆಟ್ಟು ಮಾಳ ಆನಂದ ನಿಲಯದ ಶೇಖರ್ ಶೆಟ್ಟಿ ಮುಂಬಯಿ, ಬಜಗೋಳಿ ಹೊಟೇಲ್ ಚಿರಾಗ್ ನ ಮಾಲಕ ಉಮೇಶ್ ರಾವ್, ವಿಜಯಪುರದ ಹೊಟೇಲ್ ಮೇಘರಾಜ್ ಮಾಲಕ ಸುಂದರ್ ಸಾಲಿಯಾನ್ ಬಜಗೋಳಿ, ಹುಬ್ಬಳ್ಳಿ ಶ್ರೀ ಗಣೇಶ್ ಹೊಟೇಲ್ ಮಾಲಕ ಕಜಂಬಲ ನಲ್ಲೂರು ಸದಾಶಿವ ಪುತ್ರನ್, ದ.ಕ., ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಉಪಾಧ್ಯಕ್ಷ ಕೆ.ಜಿ. ರಾಮಪ್ಪ ಪೂಜಾರಿ, ಪುಲ್ಕೇರಿ ಬೈಪಾಸ್ ಅಶುಲ್ ಅಸೋಸಿಯೇಟ್ಸ್ ನ ಅರುಣ್ ಶೆಟ್ಟಿ, ಬಜಗೋಳಿ ಮೆಘಾ ಅಸೋಸಿಯೇಟ್ಸ್ ನ ಎಂಜಿನಿಯರ್ ಮತ್ತು ಆರ್ಕಿಟೆಕ್ಟ್ ದಿವಾಕರ್ ಶೆಟ್ಟಿ, ಅಜೆಕಾರ್ ಹೊಟೇಲ್ ಸುಧಾಣ್ಣ ಮಾಲಕ ಸುಜಯ್ ಶೆಟ್ಟಿ, ಎಸ್ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಸುನಿಲ್ ಕುಮಾರ್ ಬಜಗೋಳಿ, ಎಲ್ ಐಸಿ ಚೇರ್ ಮನ್ ಕ್ಲಬ್ ಸದಸ್ಯ ಶ್ಯಾಮ್ ಶೆಟ್ಟಿ ನಲ್ಲೂರು, ಮಂಗಳೂರು ನಂದಿನಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಮುಡಾರು ಸುಧಾಕರ್ ಶೆಟ್ಟಿ ಉದ್ಯಮಿ ರಾಜು ಶೆಟ್ಟಿ ಮಿಯ್ಯಾರು, ಸಂಸ್ಥೆಯ ಪ್ರವರ್ತಕರುಗಳಾದ ಉದಯ ಸಾಲಿಯಾನ್, ಸದಾನಂದ ಸಾಲಿಯಾನ್, ಬಜಗೋಳಿ ಮಾರುತಿ ಹಾರ್ಡ್ ವೇರ್ ನ ಸತೀಶ್ ಜಿ. ಶೆಟ್ಟಿ ವೇದಿಕೆಯಲ್ಲಿದ್ದರು.

ಸನ್ಮಾನ:

ಮಂಗಳೂರು ವಲಯದ ಬ್ಯಾಂಕ್ ಆಫ್ ಬರೋಡಾ ಮುಖ್ಯಸ್ಥೆ ಗಾಯತ್ರಿ ಆರ್. ಭೇಟಿ ನೀಡಿ ಶುಭ ಹಾರೈಸಿದರು.

ಈ ಸಂದರ್ಭ ಸಂಸ್ಥೆಯ ಪ್ರವರ್ತಕರಾದ ಉದಯ ಸಾಲಿಯಾನ್ ಮತ್ತು ಜಯಾ ಉದಯ ಸಾಲಿಯಾನ್, ಸದಾನಂದ ಸಾಲಿಯಾನ್ ಮತ್ತು ಶಾಂತಾ ಸದಾನಂದ ಸಾಲಿಯಾನ್, ಶ್ರುತಿಕಾ, ಸೃಜನ್, ಶ್ರದ್ಧಾ ಮತ್ತು ಶಶಾಂಕ್ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕ ನಾಗೇಶ್ ಸ್ವಾಗತಿಸಿ, ನಿರೂಪಿಸಿದರು‌. ಉದಯ ಸಾಲಿಯನ್ ಮತ್ತು ಸದಾನಂದ ಸಾಲಿಯಾನ್ ವಂದಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.