



ಕಾರ್ಕಳ : ಕಾರ್ಯನಿರತ ಪತ್ರಕರ್ತರ ಸಂಘ, ಕಾರ್ಕಳ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇದರ ರಜತ ಮಹೋತ್ಸವ ಅಂಗವಾಗಿ ಲಯನ್ಸ್ ಕ್ಲಬ್ ನೀರೆ ಬೈಲೂರು ಮತ್ತು ಧ್ವನಿ ಬೆಳಕು ಸಂಯೋಜಕರ ಸಂಘಟನೆ ಕಾರ್ಕಳ ಇವರಸಹಯೋಗದೊಂದಿಗೆ ನ.4 ರಂದು ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಹಾಲ್ಡಿನ್ ಗ್ಲಾಸ್ ಹಾಲ್ ನಲ್ಲಿ ಸೈಬರ್ ಕ್ರೈಂ ಮಾಹಿತಿ ಶಿಬಿರವು ಪೂರ್ವಾಹ್ನ 10 ಘಂಟೆಗೆ ನಡೆಯಲಿದೆ.
ಜಿಲ್ಲಾ ರಜತ ಮಹೋತ್ಸವ ಸಮಿತಿ ಸಂಚಾಲಕ , ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಮೊಹಮ್ಮದ್ ಶರೀಫ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಲಿದ್ದು ಉಡುಪಿ ಜಿಲ್ಲಾ ಎಸ್ಪಿ ಕೆ. ಅರುಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ,, ಜೆ. ಸುಧೀರ್ ಹೆಗ್ಡೆ ಬೈಲೂರು , ಸಂತೋಷ್ ವಾಗ್ಳೆ,, ಲಯನ್ಸ್ ಗವರ್ನರ್ ಲ| ಡಾ. ನೇರಿ ಕರ್ನಾಲಿಯೋ, ಲಯನ್ಸ್ ಕ್ಲಬ್ ನೀರೆ-ಬೈಲೂರು ಅಧ್ಯಕ್ಷ ಲ| ಕೆ. ಸುಜಯ್ ಜತ್ತನ್ನ,, ,ಧ್ವನಿ ಬೆಳಕು ಸಂಯೋಜಕರ ಸಂಘಟನೆ ಜಿಲ್ಲಾಧ್ಯಕ್ಷ ಕೆ. ಧರ್ಮರಾಜ್ ಕುಮಾರ್, ಸ.ಪ.ಪೂ ಕಾಲೇಜು ಪ್ರಾಂಶುಪಾಲ ಗುರುಮೂರ್ತಿ ಟಿ., ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ,, ಕಾರ್ಕಳ ನಗರ ಠಾಣೆಯ ಪೋಲೀಸ್ ಉಪನಿರೀಕ್ಷಕ ಸಂದೀಪ್ ಶೆಟ್ಟಿ, ಉಪಸ್ಥಿತರಿರುವರು.
ಉಡುಪಿ ಸೆನ್ ಪೋಲೀಸ್ ಠಾಣೆ ಯ ಉಪನಿರೀಕ್ಷಕ ಅಶೋಕ್ ಕುಮಾರ್, ಮಣಿಪಾಲ ಪೋಲೀಸ್ ಠಾಣೆಯ ಠಾಣಾಧಿಕಾರಿ ದೇವರಾಜ್ ಟಿ.ವಿ ಸಾರ್ವಜನಿಕರು ಹಾಗು ಕಾಲೇಜು ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಲಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.