



ಕಾರ್ಕಳ: ರಾಷ್ಟ್ರಮಟ್ಟದ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸಿದ ಜೆಇಇ ಮೈನ್ ನ ಪ್ರಥಮ ಹಂತದ ಪರೀಕ್ಷೆಯ ಫಲಿತಾಂಶವು ಪ್ರಕಟವಾಗಿದ್ದು ಜ್ಞಾನಸುಧಾದ 6 ವಿದ್ಯಾರ್ಥಿಗಳು 98ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ. ಸಮೃದ್ಧ್ ನೆಲ್ಲಿ 98.8400561, ಪ್ರಣವ್ ಗುಜ್ಜರ್ 98.7609574, ಅರ್ಹನ್ ಎ ಕೆ.98.6017287, ಧ್ರುವ ಪಿ ಬಂದ್ರಕಲ್ಲಿ 98.4382123, ಧನ್ವಿತ್ ನಾಯಕ್ 98.3745854, ರೋಹಿತ್ ಹೆಗ್ಡೆ 98.1827152 ಪರ್ಸಂಟೈಲ್ ಪಡೆದಿದ್ದಾರೆ. ಭೌತ ಶಾಸ್ತ್ರದಲ್ಲಿ ಧನ್ವಿತ್ ನಾಯಕ್ (99.91) ರಸಾಯನ ಶಾಸ್ತ್ರದಲ್ಲಿ ಸಮ್ಯಕ್ ರಾವ್ (99.86), ಗಣಿತಶಾಸ್ತ್ರದಲ್ಲಿ ಶ್ರೇಯಸ್.ಆರ್.ಗೌಡ (99.49) ಪರ್ಸಂಟೈಲ್ ಗಳಿಸಿದ್ದಾರೆ. 14 ವಿದ್ಯಾರ್ಥಿಗಳು 97ಕ್ಕಿಂತ ಅಧಿಕ ಪರ್ಸಂಟೈಲ್, 33 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ ಪರ್ಸಂಟೈಲ್, 68 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸಂಟೈಲ್, ಗಳಿಸಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯಕೇಶನ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.
14 ವಿದ್ಯಾರ್ಥಿಗಳ ಹೆಸರು ಮತ್ತು ಪರ್ಸಂಟೈಲ್:
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.