



ಕಾರ್ಕಳ: ಕೇರಳ ಮೊಲದ ವ್ಯಕ್ತಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ ಘಟನೆ ಕಾರ್ಕಳ ತಾಲೂಕು ನೂರಾಳ್ ಬೆಟ್ಟು ಗ್ರಾಮದಲ್ಲಿ ನಡೆದಿದೆ. ಕೇರಳದ ವಜಿತ್ತಾಲ್ ನಿವಾಸಿ ಜೋಸೆಫ್ ಜೆ ಪಾಲಕುನ್ನಿಲ್ ಹಲ್ಲೆಗೊಳಗಾದವರು. ಜೋಸೆಫ್ ಕಾರ್ಕಳ ತಾಲೂಕು ನೂರಾಳ್ ಬೆಟ್ಟು ಗ್ರಾಮದ ವಿಜಯ ಕುಮಾರ್ ರವರ ತೋಟವನ್ನು ಲೀಸಿಗೆ ಪಡೆದುಕೊಂಡು ಅವರ ಮನೆಯ ಬಳಿ ಕೃಷಿ ಕೆಲಸ ಮಾಡಿಕೊಂಡಿದ್ದು ವಿಜಯ್ ಕುಮಾರ್ ರವರ ತೋಟದ ಮನೆಯಲ್ಲಿ ವಾಸಮಾಡಿಕೊಂಡಿದ್ದರು. ಆರೋಪಿ ವಿಜಯ ಕುಮಾರ್, ಜೋಸೆಫ್ ವಾಸವಿರುವ ಮನೆಯ ಬಳಿಗೆ ಬಂದು ಮನೆಯಿಂದ ಹೊರಗೆ ಕರೆದು ಲೀಸಿಗೆ ಪಡೆದ ತೋಟದಲ್ಲಿರುವ ವಸ್ತುಗಳನ್ನು ತೆಗೆಯುವ ವಿಚಾರದಲ್ಲಿ ಜಗಳ ಮಾಡಿ ಜೋಸೆಫ್ ಕುತ್ತಿಗೆಯನ್ನು ಹಿಡಿದು ಕೊಲೆ ಬೆದರಿಕೆ ಹಾಕಿದ್ದು,ಈ ನಡುವೆ ನಡೆದ ಗಲಾಟೆಯಲ್ಲಿ ಜೋಸೆಫ್ ಗಾಯಗೊಂಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.