



ಕಾರ್ಕಳ: ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷ ರಂಗಾಯಣ ಕಾರ್ಕಳ ಇದರ ಆಶ್ರಯದಲ್ಲಿ, ಕಾರ್ಕಳ ಕೋಟಿ ಚೆನ್ನಯ ಥೀಂ ಪರ‍್ಕ್ ಆವರಣದಲ್ಲಿ ಮೇ.9 ರಿಂದ ಮೇ 15 ರ ವರೆಗೆ ಮಕ್ಕಳ ಬೇಸಿಗೆ ಶಿಬಿರ 'ಚಿಣ್ಣರಮೇಳ- 2022" ನ್ನುಏರ್ಪಡಿಸಲಾಗಿದೆ . ಇದು ಯಕ್ಷರಂಗಾಯಣದ ಪ್ರಪ್ರಥಮ ಕಾರ್ಯಕ್ರಮವಾಗಿದ್ದು, ಸಚಿವ ವಿ.ಸುನಿಲ್ ಕುಮಾರ್ ಇವರ ಆಶಯದಂತೆ, ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಇವರ ನಿರ್ದೇಶನದಲ್ಲಿ ನಡೆಯುವ ಈ ಶಿಬಿರದಲ್ಲಿ ನಾಡಿನ ಹಿರಿಯ ಅನುಭವೀ ಸಂಪನ್ಮೂಲ ವ್ಯಕ್ತಿಗಳು ವೈವಿಧ್ಯಮಯ ವಿಷಯಗಳ ಬಗ್ಗೆ ತರಬೇತಿ ನೀಡಲಿದ್ದಾರೆ. ಸ್ವಚ್ಛ, ಸುಂದರ, ಕಲಾತ್ಮಕ ವಾತಾವರಣದಲ್ಲಿ ನಡೆಯುವ ಈ ಚಿಣ್ಣರಮೇಳದಲ್ಲಿ ಜಾದೂ ಕಲಿಕೆ, ರಂಗಾಭಿನಯ, ಮಾತುಗಾರಿಕೆ, ಮುಖವಾಡ, ಗೊಂಬೆ ತಯಾರಿ, ಕ್ರಾಫ್ಟ್, ಚಿತ್ರಕಲೆ, ಕ್ಲೇ ಮಾಡಲಿಂಗ್, ಗ್ರೀಟಿಂಗ್ಸ್, ರ‍್ಲಿಕಲೆ, ಕಥಾಭಿನಯ, ಅಭಿನಯ ಗೀತೆ, ಆತ್ಮವಿಶ್ವಾಸ ಮೂಡಿಸುವ ಚಟುವಟಿಕೆಗಳು, ಗೂಡುದೀಪ ತಯಾರಿ, ಗಾಳಿಪಟ ತಯಾರಿ, ಹಾವು- ನಾವು- ಪರಿಸರ, ಅಗ್ನಿ ಶಮನ ಪ್ರಾತ್ಯಕ್ಷಿಕೆ, ಸಾಹಿತ್ಯ- ಪುಸ್ತಕ ಪ್ರೀತಿ, ಪ್ರಥಮ ಚಿಕಿತ್ಸೆ, ಬಟ್ಟೆಗೆ ಬಣ್ಣ ಟೈ ಆ್ಯಂಡ್ ಡೈ, ಕಿರುನಾಟಕ, ಸ್ಮರಣಶಕ್ತಿ ಉದ್ದೀಪನ, ಅಂದದ ಹಸ್ತಾಕ್ಷರ, ಹಾಡು- ಕುಣಿತ ಸೇರಿದಂತೆ ಮಕ್ಕಳ ಮಾನಸಿಕ, ದೈಹಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ , ಮೌಲ್ಯಯುತ ಹತ್ತು ಹಲವು ಸಂಗತಿಗಳನ್ನು ಕಲ್ಪಿಸಲಾಗುವುದು. ಪ್ರತಿದಿನ ಪೂ.9.00 ರಿಂದ ಸಂಜೆ 4.30 ರ ತನಕ ನಡೆಯುವ ಈ ಶಿಬಿರದಲ್ಲಿ ಸೀಮಿತ ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು ವಯೋಮಿತಿ 7 ರಿಂದ 15 ರ‍್ಷ ಆಗಿರುತ್ತದೆ. ಇದರ ನೋಂದಾವಣಿಯು ಮೇ 04, ರಿಂದ 06ರ ತನಕ ಮಾನ್ಯ ಸಚಿವರ ಜನಸೇವಾ ಕಛೇರಿ 'ವಿಕಾಸ'ದಲ್ಲಿ ಮಾಡಲಾಗುವುದು. ಪ್ರವೇಶ ಶುಲ್ಕ ರೂ.250 ನಿಗದಿಪಡಿಸಿದ್ದು ಹೆಚ್ಚಿನ ವಿವರಗಳಿಗಾಗಿ 9980952012, 9844552182, 9480010096, 7975560114 ಇವರನ್ನು ಸಂರ‍್ಕಿಸಬಹುದು, ಆಸಕ್ತರು ಕೂಡಲೇ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಯಕ್ಷ ರಂಗಾಯಣದ ನರ‍್ದೇಶಕ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.