



ಕಾರ್ಕಳ: ಈದು ಶ್ರೀ ಮುಜಿಲ್ನಾಯ ಶಾಲಾ ಬಳಿಯ ಅನುಗ್ರಹ ಹೋಟೆಲ್‌ನಲ್ಲಿ ಹೊಸ್ಮಾರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಜೈನ್ ರವರ ಅಧ್ಯಕ್ಷತೆಯಲ್ಲಿ ಹಾಲು ಉತ್ಪಾದಕರ ಗ್ರಾಮ ಸಭೆ ಜರುಗಿತು. ಈದು ಗ್ರಾಮ ಪಂಚಾಯತ್ ವ್ಯಾಪ್ತಿಯ ಈದು ಅಂಗನವಾಡಿ ಬಳಿ ಹಾಲು ಉತ್ಪಾದಕರ ಸಂಘವನ್ನು ರಚಿಸಬೇಕೆಂದು ಹಲವು ವರ್ಷಗಳಿಂದ ಬೇಡಿಕೆಯ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ದ.ಕ. ಹಾಲು ಉತ್ಪಾದಕರ ಸಂಘದ ನಿರ್ದೇಶಕರುಗಳಾದ ಸದಾಶಿವ ಶೆಟ್ಟಿ ಬೋಳ, ನರಸಿಂಹ ಕಾಮತ್ ಸಾಣೂರು, ಸುಧಾಕರ್ ಶೆಟ್ಟಿ ಮುಡಾರು ಸಭೆಯಲ್ಲಿ ಉಪಸ್ಥಿತರಿದ್ದರು. ನೂತನ ಸಂಘ ರಚನೆಯ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ನಿರ್ದೇಶಕಿ ಸ್ಮಿತಾ ಶೆಟ್ಟಿ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಅನಿಲ್ ಕುಮಾರ್ ಶೆಟ್ಟಿ, ಕಾರ್ಕಳ ವಲಯ ವಿಸ್ತರಣಾಧಿಕಾರಿ ವಿನಯ್ ಕುಮಾರ್, ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪುರುಷೋತ್ತಮ ಎಚ್. ಉಪಸ್ಥಿತರಿದ್ದರು. ಇದೇ ಸಂದರ್ಭ ೧೩ ಮಂದಿ ಪ್ರವರ್ತಕರನ್ನು ಆಯ್ಕೆ ಮಾಡಿ ಇವರಲ್ಲಿ ಮುಖ್ಯ ಪ್ರವರ್ತಕರಾಗಿ ರಾಜು ಪೂಜಾರಿಯವರನ್ನು ಆಯ್ಕೆ ಮಾಡಲಾಯಿತು. ತಾತ್ಕಾಲಿಕ ಕಾರ್ಯದರ್ಶಿಯಾಗಿ ಶ್ರೀಧರ್ ಗೌಡ ಈದು ಇವರನ್ನು ಆಯ್ಕೆ ಮಾಡಲಾಯಿತು. ಪ್ರಶಾಂತ್ ಪೂಜಾರಿ ಚಿತ್ತಾರ ನಿರ್ವಹಿಸಿದರು. ಶ್ರೀಧರ್ ಗೌಡ ಈದು ಸ್ವಾಗತಿಸಿ, ಧನ್ಯವಾದವಿತ್ತರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.