



ಕಾರ್ಕಳ : ಲಾರಿ ಚಾಲಕನನ್ನು ಆಯುಧದಿಂದ ಇರಿದು ಕೊಲೆಗೈದ ಘಟನೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಮುಡ್ರಾಲು ಸಮೀಪದ ಗೇರುಬೀಜ ಪ್ಯಾಕ್ಟರಿ ಬಳಿ ನಡೆದಿದೆ. ತಮಿಳುನಾಡು ಮೂಲದ ಮಣಿ (36) ಕೊಲೆಯಾದ ವ್ಯಕ್ತಿ.
ಮುಡ್ರಾಲುನ ಫ್ಯಾಕ್ಟರಿ ಗೆ ಪ್ರತಿವರ್ಷವೂ ತಮಿಳುನಾಡಿನಿಂದ ಗೇರು ಬೀಜ ಲೋಡ್ ಬರುತ್ತಿದ್ದು ಅವರುಗಳು ಲಾರಿಯಲ್ಲಿ ಅನ್‌ಲೋಡ್ ಮಾಡಿ ಹೋಗುತ್ತಿದ್ದರು. ಅದರಂತೆ ಜ.30ರಂದು ಸಂಜೆ 4:00 ಗಂಟೆಗೆ ಗೇರುಬೀಜದ ಲೋಡ್ ಇರುವ ಲಾರಿಗಳು ಬಂದಿದ್ದು ಅವರುಗಳು ಅನ್ ಲೋಡ್ ಮಾಡಿ ಹೋಗಿದ್ದು ಇನ್ನೆರಡು ಲಾರಿಗಳು ಸಂಜೆ 05:30 ಗಂಟೆಗೆ ಬಂದಿದ್ದು ತಡವಾದ್ದರಿಂದ ಲಾರಿಯು ಅನ್‌ಲೋಡ್ ಆಗದೇ ಫ್ಯಾಕ್ಟರಿಯ ಬಳಿ ನಿಂತುಕೊಂಡಿತ್ತು. ಲಾರಿಗಳ ಚಾಲಕ ಹಾಗೂ ಬದಲಿ ಚಾಲಕರುಗಳು ಕೂಡಾ ಅಲ್ಲಿಯೇ ಇದ್ದು ರಾತ್ರಿ 8:30 ಗಂಟೆಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕಾರ್ಮಿಕರೋರ್ವರಿಗೆ ಫ್ಯಾಕ್ಟರಿಯ ಮೇಲ್ಗಡೆ ಕೆಲಸ ಮಾಡುತ್ತಿರುವಾಗ ಲಾರಿ ನಿಲ್ಲಿಸಿದ ಸ್ಥಳದಿಂದ ಜೋರಾಗಿ ಬೊಬ್ಬೆ ಕೇಳಿಸಿದ್ದು, ಅಲ್ಲಿಗೆ ಹೋಗಿ ನೋಡಿದಾಗ ಲಾರಿಯ ಚಾಲಕ ಮಣಿ (36) ಲಾರಿಯ ಎದುರುಗಡೆ ಆತನ ಕುತ್ತಿಗೆಗೆ ಶಾಲ್ ಬಿಗಿದು ಯಾವುದೋ ಆಯುಧದಿಂದ ಇರಿದು ಕೊಲೆ ಮಾಡಿರುವುದು ಕಂಡುಬಂದಿದೆ.
ಲಾರಿಯ ಇನ್ನೋರ್ವ ಚಾಲಕ ವೀರಬಾಹು ಹಾಗೂ ಮೃತ ಮಣಿ ಗಲಾಟೆ ಮಾಡಿಕೊಳ್ಳುತ್ತಿದ್ದು, ಯಾವುದೋ ಕಾರಣದಿಂದ ಲಾರಿಯ ಇನ್ನೋರ್ವ ಚಾಲಕ ವೀರಬಾಹು ಮಣಿಯನ್ನು ಕೊಲೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.