



ಕಾರ್ಕಳ: ಪರಶುರಾಮ ಮೂರ್ತಿ ಯ ವಿವಾದ ತಾರಕಕ್ಕೆರಿದ್ದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭೇಟಿ ನೀಡಿದ ಬೆನ್ನಲ್ಲೇ ಬಿಜೆಪಿಗರು ಅದೇ ಸ್ಥಳಕ್ಕೆ ಅಗಮಿಸಿ ಮೂರ್ತಿಯ ಮೇಲ್ಭಾಗದಲ್ಲಿ ಸುತ್ತಿಗೆಯನ್ನೇ ಹಿಡಿದುಕೊಂಡು ಬಂದರಲ್ಲದೇ ಪರಶುರಾಮನ ಮೂರ್ತಿ ಕಂಚಿನದೆಂದು ಸಮರ್ಥಿಸಿ ಸುತ್ತಿಗೆಯಿಂದ ಪರಶುರಾಮನ ಕಾಲಿನ ಭಾಗಗಳಿಗೆ ಹೊಡೆದಿದ್ದಾರೆ .
ಕಾಂಗ್ರೆಸ್ಸಿಗರೇ ಸುನಿಲ್ ಕುಮಾರ್ ಅವರನ್ನು ರಾಜಕೀಯವಾಗಿ ಎದುರಿಸಲಾಗದೇ ಅವರ ಅಭಿವೃದ್ಧಿ ಕಾರ್ಯಗಳಲ್ಲಿ ತಪ್ಪುಗಳನ್ನು ಹುಡುಕುತ್ತಾ, ಸಾವಿರ ಸಲ ಸುಳ್ಳುಗಳನ್ನು ಹೇಳಿ ಸತ್ಯ ಎಂದು ನಂಬಿಸಲು ಹೊರಟಿರುವ ನಿಮ್ಮ ಕೀಳು ರಾಜಕೀಯ ಬುದ್ಧಿಯಿಂದಾಗಿ ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಹೊಂದುತ್ತಿರುವ ಕಾರ್ಕಳದ ಕೀರ್ತಿಯನ್ನು ಹಾಳು ಮಾಡಬೇಡಿ ಎಂದು ಸಾಮಾಜಿಕ ಜಾಲ ತಾಣ ದಲ್ಲಿ ಹಂಚಿಕೊಂಡಿದ್ದಾರೆ
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಹಾವೀರ ಹೆಗ್ಡೆ, ಕರುಣಾಕರ್ ಕೊಟ್ಯಾನ್ , ವಿಖ್ಯಾತ್ ಶೆಟ್ಟಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.