logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ: ರಿಕ್ಷಾ ಚಾಲಕರಿಂದ ಬಟ್ಟೆ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ

ಟ್ರೆಂಡಿಂಗ್
share whatsappshare facebookshare telegram
2 May 2022
post image

ಕಾರ್ಕಳ: ರಿಕ್ಷಾ ಬಾಡಿಗೆ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರ ಮೇಲೆ ರಿಕ್ಷಾ ಚಾಲಕರು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಕುಕ್ಕುಂದೂರು ಯೋಗೀಶ ನಾಯಕ್ ಕಾರ್ಕಳ ಜೋಡು ರಸ್ತೆಯಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಎ.29 ರಂದು ತಮ್ಮ ಅಂಗಡಿಯ ಮಾಲೀಕರ ಮತ್ತೊಂದು ಅಂಗಡಿಯ ಕೆಲಸಗಾರರಿಗೆ ತಿಂಡಿ ಕೊಡಲು ಹೋಗುತ್ತಿರುವಾಗ ಆಪಾದಿತ ರಿಕ್ಷಾಚಾಲಕ ಪದ್ಮನಾಭ ಶೆಟ್ಟಿಗಾರ್, ಮನೋಜ್ ಮತ್ತು ಪ್ಯಾಸ್ಕಲ್ ಎಂಬುವರು ಯೋಗೀಶ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಮಾತ್ರವಲ್ಲದೆ ತಮಗೆ ರಿಕ್ಷಾ ಬಾಡಿಗೆ ನೀಡದೆ ಬೇರೆಯವರಿಗೆ ನೀಡಿದ್ದಕ್ಕೆ ಮೂವರು ತಮ್ಮ ಆಟೋದಲ್ಲಿ ಬೆನ್ನಟ್ಟಿ ಬಂದು ಯೋಗೀಶ್ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಹಲ್ಲೆಗೊಳಗಾದ ಯೋಗೀಶ್ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.