logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ : ಕಾಂಗ್ರೆಸ್‌ನಿಂದ ಮೇ1ರಂದು ರೋಡ್ ಶೋ ಮತ್ತು ಬೃಹತ್ ಸಮಾವೇಶ

ಟ್ರೆಂಡಿಂಗ್
share whatsappshare facebookshare telegram
30 Apr 2023
post image

ಕಾರ್ಕಳ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಕಾಂಗ್ರೇಸ್ ಕಾಲ್ನಡಿಗೆ ಜಾಥಾ ಹಾಗೂ ಬೃಹತ್ ಸಮಾವೇಶ ಮೇ 1 ಸೋಮವಾರ ರಂದು ಆಯೋಜಿಸಲಾಗಿದೆ.

ಅಂದು ಮಧ್ಯಾಹ್ನ 3ಕ್ಕೆ ಸ್ವರಾಜ್ಯ ಮೈದಾನದಿಂದ ಪ್ರಾರಂಭಗೊಳ್ಳುವ ಬೃಹತ್ ಜಾಥವು ಬಂಡೀಮಠ ಬಸ್ ನಿಲ್ದಾಣದವರೆಗೆ ಕಾಲ್ನಡಿಗೆಯಲ್ಲಿ ರೋಡ್ ಶೋ ಮೂಲಕ ಸಾಗಿ ಬಂದು ಬೃಹತ್ ಸಮಾವೇಶದೊಂದಿಗೆ ಸಮಾಪನಗೊಳ್ಳಲಿದೆ.

ಪಕ್ದದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಡಾ.ಎಂ ವೀರಪ್ಪ ಮೊಯಿಲಿ, ಅಭ್ಯರ್ಥಿ ಮುನಿಯಾಲ್ ಉದಯ್ ಶೆಟ್ಟಿ, ಪ್ರಮುಖ ಭಾಷಣಗಾರಾಗಿ ವಾಗ್ಮಿ ನಿಕೇತ್ ರಾಜ್ ಮೌರ್ಯ, ಸುಧೀರ್ ಕುಮಾರ್ ಮುರೋಳಿ, ಮತ್ತು ಜಿಲ್ಲಾದ್ಯಕ್ಷ ಅಶೋಕ್ ಕೊಡವೂರು ಪಕ್ಷದ ರಾಜ್ಯ ನಾಯಕರು, ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ.

ಕ್ಷೇತ್ರದಾದ್ಯಂತ ಮತದಾರರು ಬದಲಾವಣೆಯನ್ನು ಬಯಸುತ್ತಿದ್ದು ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಉದಯ್ ಶೆಟ್ಟಿ ಪರವಾಗಿ ಒಲವು ತೋರಿಸುತ್ತಿದ್ದಾರೆ. ಪ್ರತೀ ಬೂತಿನಿಂದ 200 ಕ್ಕೂ‌ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ.

ಶಾಸಕರ ಕಮಿಷನ್ ಮತ್ತು ಕಲೆಕ್ಷನ್‌ ಕಾರ್ಯವೈಖರಿ ಯಿಂದ ಬೇಸತ್ತವರು, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮೇಲೆ ನಂಬಿಕೆ‌ ಇಟ್ಟವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಭಯ ಮತ್ತು ಭ್ರಷ್ಟಾಚಾರ ಮುಕ್ತ ಸೌಹಾರ್ದ ಸಮಾಜಕ್ಕಾಗಿ ಕ್ಷೇತ್ರದ ಮತದಾರ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಚಾರ ಸಮಿತಿ ಅಧ್ಯಕ್ಷ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.