



ಕಾರ್ಕಳ: ಕ್ರೀಡಾ ಕ್ಷೇತ್ರದಲ್ಲಿ ತೋರಿದ ಉತ್ತಮ ಸಾಧನೆ ಗುರುತಿಸಿ ಕಾರ್ಕಳ ತಾಲೂಕಿನ ಬೈಲೂರು ಪ್ರೌಢಶಾಲೆ 9ನೇ ತರಗತಿಯ ವಿದ್ಯಾರ್ಥಿ ಶಯನ್ ಡಿ. ಶೆಟ್ಟಿ ಅವರಿಗೆ ನಾಡಿನ ಸಮಾಚಾರ ಸೇವಾ ಸಂಘ ಗೋಕಾಕ್ ಇವರು ಸಾಧಕರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಶಯನ್ ಕರಾಟೆ ಮಾಸ್ಟರ್ ಗಳಾದ ಸೋಮನಾಥ ಡಿ. ಸುವರ್ಣ ಮತ್ತು ಡಾ. ವಿಜಯಲಕ್ಷ್ಮಿ ಆರ್ ನಾಯಕ್ ಅವರ ಶಿಷ್ಯ. ಪ್ರಸ್ತುತ ಬೈಲೂರು ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿರುವ ಕರಾಟೆ ತರಗತಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ಬೈಲೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಸರ್ ಹಾಗೂ ಪಿ.ಟಿ ಟೀಚರ್ ಫೆಡ್ರಿಕ್ ರೇಬೆಲ್ಲೊ ಇವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಪ್ರತಿನಿಧಿಯಾಗಿ ಹಲವು ಕರಾಟೆ ಪಂದ್ಯಾಟದಲ್ಲಿ ಭಾಗವಹಿಸಿ ತಾಲೂಕು, ಜಿಲ್ಲಾ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಇವರು ನೀರೆ ಗ್ರಾ.ಪಂಚಾಯತ್ ನ ಮಾಜಿ ಅಧ್ಯಕ್ಷರಾದ ರಮೇಶ್ ಕಲ್ಲೊಟ್ಟೆಯವರ ಸಹೋದರ ಶ್ರೀ ದಿನೇಶ್ ಶೆಟ್ಟಿ ಮತ್ತು ಸುಪ್ರಿಯಾ ಶೆಟ್ಟಿ ದಂಪತಿಗಳ ಮಗನಾಗಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.