



ಕಾರ್ಕಳ: ನಿರಂತರವಾಗಿ ಸದ್ದಿಲ್ಲದೆ ಒಂದಿಲ್ಲೊ0ದು ಸೇವೆಯಲ್ಲಿ ಸದಾ ಮಗ್ನರಾಗುವ ಉಡುಪಿ ಜಿಲ್ಲೆಯ ಎಳ್ಳಾರೆ ಮಾವಿನಕಟ್ಟೆ ಶಂಕರ ಶೆಟ್ಟಿ ಮುನಿಯಾಲು ಅವರಿಗೆ ಅಖಿಲ ಗೋವಾ ಕನ್ನಡಿಗರ ಮಹಾ ಸಂಘ ನೀಡಿದ ಸಮಾಜಸೇವ ರತ್ನ ಪ್ರಶಸ್ತಿ ದೊರೆತಿದ್ದು ಶನಿವಾರ ಗೋವಾದ ಪಣಜಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಲನಚಿತ್ರ ನಟಿ ಮಿಸ್ ಇಂಡಿಯಾ ಪ್ರಶಸ್ತಿ ಪುರಸ್ಕೃತರಾದ ಡಾ. ಪೂಜಾ ರಮೇಶ್ ಪ್ರಶಸ್ತಿ ಮಾಡಿದರು.
ನನ್ನ ಸಾಧನೆ ಮತ್ತು ಕಿಂಚಿತ್ ಜನಸೇವೆಗೆ ಪತ್ನಿ ಸವಿತಾ ಶೆಟ್ಟಿ, ಮಕ್ಕಳು,ಕುಟುಂಬದವರು, ನಮ್ಮೂರಿನ ನನ್ನ ಗೆಳೆಯರು, ಮತ್ತು ನನ್ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಆತ್ಮೀಯ ಮಿತ್ರರ ಸಹಕಾರವನ್ನು ಶಂಕರ ಶೆಟ್ಟಿ ಸ್ಮರಿಸಿದರು.
ರಾಮಣ್ಣ ಶೆಟ್ಟಿ ಮತ್ತು ಜಲಜ ಶೆಟ್ಟಿ ಅವರ ಪುತ್ರರಾಗಿರುವ ಶಂಕರ ಶೆಟ್ಟಿ ಒರ್ವ ದಿನಸಿ ಅಂಗಡಿಯಲ್ಲಿ ನೌಕರನಾಗಿದ್ದರೂ ಬಡವರ ಬಗೆಗಿನ ಕಾಳಜಿಯಲ್ಲಿ ಜನಮನಗೆದ್ದಿದ್ದಾರೆ. ವಿವಿಧ ಸಂಘಸAಸ್ಥೆಗಳಲ್ಲಿ ಸಕ್ರೀಯರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಸದಸ್ಯನಾಗಿ ಪರಿಸರದ ವಿವಿಧ ಸಂಘಸAಸ್ಥೆಯಲ್ಲಿ ಸದಸ್ಯನಾಗಿ ಜಾತಿ ಮತ ಭೇದ ವಿಲ್ಲದೆ ಸಕ್ರೀಯವಾಗಿ ಜನರ ಸೇವೆ ಸಲ್ಲಿಸುತ್ತಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.