



ಕಾರ್ಕಳ : ಶ್ರೀ ಭುವನೇಂದ್ರ ಕಾಲೇಜು, ಜನವರಿ 2023ರ ಮಾಹೆಯಲ್ಲಿ ತನ್ನ ನಾಲ್ಕನೇ ಆವರ್ತದ ನ್ಯಾಕ್ ಮೌಲ್ಯಮಾಪನದಲ್ಲಿ ತನ್ನ ಹಿರಿಮೆಗೆ ತಕ್ಕ ಅಂಕಗಳನ್ನು ಪಡೆಯದಿದ್ದಾಗ ನವದೆಹಲಿಯ ನ್ಯಾಕ್ ಸಂಸ್ಥೆಗೆ ಮರುಮೌಲ್ಯಮಾಪನಕ್ಕಾಗಿ ಮರು ಮನವಿ ಸಲ್ಲಿಸಿತ್ತು.
ಆ ಪ್ರಕಾರ ಕಳೆದ ತಿಂಗಳು ಪ್ರೊ. ಅಮರ್ ರೇ, ಪ್ರಾಧ್ಯಾಪಕರು, ನಾರ್ತ್ ಈಸ್ಟರ್ನ್ ವಿಶ್ವವಿದ್ಯಾಲಯ, ವಾರಣಾಸಿ, ಡಾ. ಪೂರನ್ ಕವಿದಯಾಲ್ ., ಪ್ರಾಧ್ಯಾಪಕರು ಕುಮೌನ್ ವಿಶ್ವವಿದ್ಯಾಲಯ, ನೈನಿತಾಲ್, ಡಾ. ಮಹಾದೇವ್ ಗೌಹಾನೆ, ಪ್ರಾಂಶುಪಾಲರು, ರಾಜಶ್ರೀ ಶಾಹು ಮಹವಿದ್ಯಾಲಯ, ಲಾತೂರ್, ಇವರನ್ನೊಳಗೊಂಡ ಮೂರು ಜನ ತಜ್ಞರ ತಂಡ ಬೆಂಗಳೂರಿನ ನ್ಯಾಕ್ ಸಂಸ್ಥೆಯ ನಿರ್ದೇಶನದಂತೆ ಪುನ: ಪರಿಶೀಲಿಸಿ ಅಂತಿಮ ವರದಿಯನ್ನು ಸಲ್ಲಿಸಿತ್ತು. ತಜ್ಞರು ಸಲ್ಲಿಸಿದ ಮೌಲ್ಯಮಾಪನ ವರದಿಯಂತೆ ಶ್ರೀ ಭುವನೇಂದ್ರ ಕಾಲೇಜು ‘ಎ’ ಗ್ರೇಡ್ (3.16 ಅಂಕ) ಪಡೆದುಕೊಂಡಿದೆ. ಇದು ಕಾಲೇಜಿನ ಸರ್ವಾಂಗೀಣ ಬೆಳವಣ ಗೆ ಮತ್ತು ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂಬುದಾಗಿ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಎ. ಕೋಟ್ಯಾನ್ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕರಾದ ಪ್ರೊ. ನಾಗಭೂಷಣ ಎಚ್.ಜಿ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ನ್ಯಾಕ್ ಸಮಿತಿ ಮತ್ತು ಸಹಕಾರ ನೀಡಿದ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.