logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳ:ಕೇರಳ ಮೂಲದ ವ್ಯಕ್ತಿ ಯ ಸುಟ್ಟು ಕೊಲೆ ಶಂಕೆ . ಕೆಲಸಗಾರ ನಾಟ್ ರಿಚಬಲ್

ಟ್ರೆಂಡಿಂಗ್
share whatsappshare facebookshare telegram
20 Oct 2022
post image

ಕಾರ್ಕಳ: ಸಾಣೂರು ಶುಂಠಿಗುಡ್ಡೆ ಎಂಬಲ್ಲಿ ವ್ಯಕ್ತಿ ಯೊಬ್ಬರ ಸುಟ್ಟ ಮೃತದೇಹವು ಅ.19 ರಂದು ಪತ್ತೆಯಾಗಿದೆ . ಮೃತ ವ್ಯಕ್ತಿ ಗೋಪಿ (60) ಕೇರಳ ಮೂಲದವರು ಎಂದು ಹೇಳಲಾಗಿದೆ. ..ಮೇಲ್ನೋಟಕ್ಕೆ ಕೊಲೆಗೈದು ಸುಡಲಾಗಿದೆ ಎಂದು ಸಂಶಯ ವ್ಯಕ್ತವಾಗಿದೆ.

ಕಾರ್ಕಳದ ವಿವೇಕಾನಂದ ಶೆಣೈ ಎಂಬುವವರು ಸಾಣೂರು ಗ್ರಾಮದ ಶುಂಠಿಗುಡ್ಡೆ ಎಂಬಲ್ಲಿ ಕೇರಳದ ಬಿಜು ಥೋಮಸ್ ಎಂಬುವವರ ರಬ್ಬರ್ ಪ್ಲಾಂಟೇಶನ್ ಪಡೆದುಕೊಂಡು ವ್ಯವಹಾರ ಮಾಡಿಕೊಂಡಿದ್ದು ದಿಲೀಪ್ ವಿವೇಕಾನಂದ ಶೆಣೈ ಎಂಬುವವರೊಂದಿಗೆ ಗೇರು ಬೀಜ ಕಾರ್ಖಾನೆಯ ಪಾಲುದಾರನಾಗಿ ಕೆಲಸ ಮಾಡಿಕೊಂಡಿದ್ದರು.

ಪ್ಲಾಂಟೇಷನ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ದಿಲೀಪ್ ರವರಿಗೆ ಗ್ರಾಸ್ ಕಟ್ಟಿಂಗ್ ಮಾಡಲು ಬಂದ ವಸಂತ ಎಂಬಾತ ಕರೆ ಮಾಡಿ ಗೇಟಿನ ಮುಂದೆ ಸ್ವಲ್ಪ ದೂರದಲ್ಲಿ ದಾರಿಯ ಬದಿಯಲ್ಲಿ ಮೃತದೇಹದಂತೆ ಪತ್ತೆಯಾದುದರ ಕುರಿತು ತಿಳಿಸಿದ್ದು ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿದಾಗ ಮೃತದೇಹ ಪತ್ತೆಯಾಗಿದೆ.

ತೋಟದಲ್ಲಿ ಕೆಲಸ ಮಾಡುತ್ತಿದ್ದ ಗೋಪಿ ಎಂಬಾತನ ಮೃತದೇಹ ಇದಾಗಿದ್ದು ಮೃತದೇಹದ ಹತ್ತಿರ ಸಿಗರ್ ಲೈಟರ್ ಹಾಗೂ ಪೆಟ್ರೋಲ್ ಕ್ಯಾನಿನ ಮುಚ್ಚಳ ಕಂಡುಬಂದಿದೆ. ಇನ್ನೊಬ್ಬ ಕಾರ್ಮಿಕ ಬಾಹುಲೇಯನ್ ಎಂಬಾತನಿಗೆ ಕರೆ ಮಾಡಿದಾಗ ಮೋಬೈಲ್ ಪೋನ್ ಸ್ವಿಚ್ಆಫ್ ಆಗಿದೆ.

ಎರಡು ದಿನಗಳ ಹಿಂದೆ ದಿಲೀಪ್ ರವರೊಂದಿಗೆ ಗೋಪಿ ಮಾತನಾಡಿದ್ದು ಬಳಿಕ ಈ ಕೊಲೆ ನಡೆದಿದೆ .ಜೊತೆಯಲ್ಲಿದ್ದ ಕೆಲಸಗಾರ ಬಾಹುಲೇಯನ್ ಕಾಣೆಯಾಗಿರುವುದರಿಂದ ಗೋಪಿಯನ್ನು ಆತನೇ ಕೊಲೆಗೈದು ಸುಟ್ಟಿದ್ದಾನೆ ಎಂದು ಸಂಶಯಿಸಲಾಗಿದೆ.ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.