



ಕಾರ್ಕಳ: ತನ್ನ ತಾಯಿಯ ಸಾವಿನ ಬಗ್ಗೆ ತನ್ನ ತಂದೆ ಹಾಗೂ ಚಿಕ್ಕಪ್ಪಂದಿರ ಮೇಲೆ ಸಂಶಯ ವ್ಯಕ್ತಪಡಿಸಿ ಮಗಳೊಬ್ಬಳು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ಇಲ್ಲಿನ ಕುಂಟಲ್ಪಾಡಿಯ ಅಪಾರ್ಟ್ ಮೆಂಟಲ್ಲಿ ಸುರೇಂದ್ರ ಕುಡ್ವ (70) ಮತ್ತು ಗೀತಾ (68) ವಾಸಿಸುತಿದ್ದರು. ಸೋಮವಾರ ಪಕ್ಕದ ಫ್ಲಾಟ್‌ನವರು ಮಗಳು ಧನಶ್ರಿ ಅವರಿಗೆ ಕರೆ ಮಾಡಿ, ಅವರ ತಾಯಿ ಗೀತಾ ಅವರಿಗೆ ಬೆಂಕಿಯಿಂದ ಸುಟ್ಟ ಗಾಯಗಳಾಗಿರುವುದಾಗಿ ತಿಳಿಸಿದ್ದರು. ಗೀತಾ ಅವರು ತನಗೆ ತಾನೇ ಬೆಂಕಿ ಹಚ್ಚಿಕೊಂಡೆ ಎಂದು ತಿಳಿಸಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿರುತ್ತಾರೆ. ತಾಯಿ ಮೈಗೆ ಬೆಂಕಿ ತಗಲಿದ್ದಾಗ ತನ್ನ ತಂದೆ ನೋಡುತ್ತಾ ನಿಂತಿದ್ದರು ಎಂದು ಪಕ್ಕದ ಫ್ಲಾಟ್‌ನವರು ಹೇಳಿದ್ದು, ಫ್ಲಾಟ್‌ನ ವಿಚಾರದಲ್ಲಿ ತನ್ನ ತಂದೆ ಹಾಗೂ ಅವರ ತಮ್ಮಂದಿರು ಕೇಸ್ ಹಾಕಿದ್ದಾರೆ. ಆದ್ದರಿಂದ ಅವರೆಲ್ಲರೂ ಸೇರಿ ತನ್ನ ತಾಯಿಗೆ ಮಾನಸಿಕ ಕಿರುಕುಳ ಕೊಟ್ಟು ಬೆಂಕಿ ಹಾಕಿಕೊಳ್ಳಲು ಪ್ರೇರೆಪಿಸಿದ್ದಾರೆ ಎಂದು ಧನಶ್ರೀ ಅವರು ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಸಂಖ್ಯೆ 46/2021 ಕಲಂ 174C CRPC ಯಂತೆ ಪ್ರಕರಣ ದಾಖಲಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.