



ಕಾರ್ಕಳ: ಸರಕಾರಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರ 56 ಗ್ರಾಂ ನ ಚಿನ್ನದ ಕರಿಯ ಮಣಿಸರ ಕಳ್ಳತನವಾದ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳಾ ಸಿಬ್ಬಂದಿಯೊಬ್ಬರು ಚಿನ್ನದ ಸರವನ್ನು ಬ್ಯಾಗ್ ನಲ್ಲಿ ಇರಿಸಿ ಡ್ಯೂಟಿಗೆ ಹಾಜರಾಗಿದ್ದು, ಹಿಂತಿರುಗಿ ಪರಿಶೀಲಿಸುವ ಸಮಯ ಕರಿಯ ಮಣಿಸರ ಕಳ್ಳತನವಾದ ವಿಚಾರ ತಿಳಿದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಕೈಕೊಟ್ಟ ಸಿಸಿಟಿವಿ : ಕೆಲವು ದಿನಗಳಿಂದ ಸಿಸಿ ಟಿವಿ ಹಾಳಾಗಿದ್ದು ತನಿಖೆಗೆ ಅಡಚಣೆ ಉಂಟಾಗಿದೆ.ಕಾರ್ಕಳ ನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.