logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಕಾರ್ಕಳ : ತಾಲೂಕು ಮಟ್ಟದ ಬೃಹತ್ ಆರೋಗ್ಯ ಮೇಳ

ಟ್ರೆಂಡಿಂಗ್
share whatsappshare facebookshare telegram
25 Apr 2022
post image

ಕಾರ್ಕಳ::ತಾಲೂಕಿನಲ್ಲಿ ೭೫ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ತಾಲೂಕು ಮಟ್ಟದ ಬೃಹತ್ ಆರೋಗ್ಯ ಮೇಳವನ್ನು ಕೇಂದ್ರ ಸರಕಾರ, ರಾಜ್ಯ ಸರಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಉಡುಪಿ, ತಾಲೂಕು ಆರೋಗ್ಯಾಧಿಕಾರಿ ಕಛೇರಿ ಕಾರ್ಕಳ:, ಸರಕಾರಿ ಸರ‍್ವಜಿನಿಕ ಆಸ್ಪತ್ರೆ ಕಾರ್ಕಳ:, ವಿವಿಧ ಇಲಾಖೆಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸರ‍್ವಜನಿಕ ಆಸ್ಪತ್ರೆ ಕಾರ್ಕಳ: ಇಲ್ಲಿ ಆಯೋಜಿಸಿಲಾಯಿತು ಕಾರ‍್ಯಕ್ರಮವನ್ನು ಉದ್ಘಾಟಿಸಿದ ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ವಿ. ಸುನೀಲ್ ಕುಮಾರ್ ಇವರು ಸಮಾಜದ ಎಲ್ಲಾ ರ‍್ಗದ ಜನರಿಗೆ ಎಲ್ಲಾ ತಜ್ಞವೈದ್ಯರ ಸೇವೆಗಳು ಮತ್ತು ಇತರೆ ಆರೋಗ್ಯ ಸೇವೆಗಳು ಒಂದೇ ಸೂರಿನಡಿ ದೊರೆಯಬೇಕೆನ್ನುವ ಕಲ್ಪನೆಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡಿದ ಯೋಜನೆಯಂತೆ ಎಲ್ಲಾ ತಾಲೂಕುಗಳಲ್ಲಿ ಆರೋಗ್ಯ ಮೇಳ ನಡೆಯುತ್ತಿದ್ದು ಅದರಂತೆ ನಮ್ಮ ತಾಲೂಕಿನಲ್ಲೂ ಕೂಡ ಬಹಳ ವ್ಯವಸ್ಥಿತವಾಗಿ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಆರೋಗ್ಯ ಮೇಳವನ್ನು ಆಯೋಜಿಸಿದ ಆರೋಗ್ಯ ಇಲಾಖೆ ಮತ್ತು ತಾಲೂಕು ಆಡಳಿತ ಅಭಿನಂದನರ‍್ಹ ಎಂದರು. ಕೋವಿಡ್ ಸಂರ‍್ಭದಲ್ಲಿ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಬಂದ ಬೇರೆ ಬೇರೆ ರೀತಿಯ ಸವಾಲುಗಳನ್ನು ಸರಕಾರ ಹೆಚ್ಚು ಸಾವುಗಳು ಸಂಭವಿಸದಂತೆ ಯಶಸ್ವಿಯಾಗಿ ಎದುರಿಸಿದೆ. ಕೋವಿಡ್ ಲಸಿಕಾಕರಣದಲ್ಲಿ ಪ್ರಥಮ ಡೋಸ್ ೧೦೦ ಪ್ರತಿಶತ ಮತ್ತು ದ್ವಿತೀಯ ಡೋಸ್ ೯೯ ಪ್ರತಿಶತ ಆಗಿದ್ದು ಇದೊಂದು ಗಮನರ‍್ಹ ಸಾಧನೆಯಾಗಿರುತ್ತದೆ. ಪ್ರಸ್ತುತ ಕೋವಿಡ್ ಲಸಿಕೆಯು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು ನಾಲ್ಕನೇ ಅಲೆ ಬಂದರೂ ಸರಕಾರ ಮತ್ತು ಇಲಾಖೆ ಎದುರಿಸಲು ಸಿದ್ಧರಾಗಿರುತ್ತಾರೆ. ತಾಲೂಕು ಆಸ್ಪತ್ರೆಯಲ್ಲಿ ಮಕ್ಕಳ ಐ.ಸಿ.ಯು., ಆಮ್ಲಜನಕ ಘಟಕ ಕಲ್ಪಿಸಲಾಗಿದ್ದು ಸಕಲ ವ್ಯವಸ್ಥೆಗಳು ಲಭ್ಯವಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ, ಮಾನ್ಯ ಅಧ್ಯಕ್ಷರು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು, ಶ್ರೀ ಮಣಿರಾಜ್ ಶೆಟ್ಟಿ ಮಾನ್ಯ ಅಧ್ಯಕ್ಷರು ರ‍್ನಾಟಕ ಗೇರು ಅಭಿವೃದ್ಧಿ ನಿಗಮ, ಶ್ರೀಮತಿ ಸುಮಾ ಕೇಶವ್ ಅಧ್ಯಕ್ಷರು ಪುರಸಭೆ ಕರ‍್ಕಳ, ಶ್ರೀ ಪ್ರದೀಪ್ ಕರ‍್ಡೇಕರ್ ಮಾನ್ಯ ತಹಶೀಲ್ದಾರರು ಶ್ರೀ ಗುರುದತ್ ತಾಲೂಕು ಪಂಚಾಯತ್ ,ಶ್ರೀಮತಿ ರೂಪ ಶೆಟ್ಟಿ ಮುಖ್ಯಾಧಿಕಾರಿಗಳು ಪುರಸಭೆ ಶ್ರೀ ಸಂಪತ್ ಕುಮಾರ್ ವೃತ್ತ ನಿರೀಕ್ಷಕರು, ಶ್ರೀಮತಿ ಪಲ್ಲವಿ, ಉಪಾಧ್ಯಕ್ಷರು, ಪುರಸಭೆ ಕರ‍್ಕಳ, ಡಾ. ಸತೀಶ್ ಆಚರ‍್ಯ ಜಿಲ್ಲಾ ಆಯುಷ್ ವೈದ್ಯಾಧಿಕಾರಿ, ಅರೋಗ್ಯಾಧಿಕಾರಿಗಳಾದ ಡಾ. ಕೃಷ್ಣಾನಂದ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು. ಕಾರ್ರ‍್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಉಚಿತ ಕನ್ನಡಕ ವಿತರಣೆ, ನೇತ್ರದಾನದ ಪ್ರಮಾಣ ಪತ್ರ, ಆಯುಷ್ಮಾನ್ ಭಾರತ್ ಕರ‍್ಡ್ ವಿತರಣೆ, ಸೊಳ್ಳೆ ಪರದೆ ವಿತರಣೆ ಮಾಡಲಾಯಿತು. ಇದೇ ಸಂರ‍್ಭದಲ್ಲಿ ಫಲಾನುಭವಿಗಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದ ಶ್ರೀ ಜಗದೀಶ್ ಮಲ್ಯ ಹಾಗೂ ಇನ್ನಿತರ ದಾನಿಗಳನ್ನು ಗೌರವಿಸಲಾಯಿತು. ರಾಷ್ಟ್ರಪ್ರಶಸ್ತಿ ವಿಜೇತ ಯೋಗ ಗುರುಗಳಾದ ಶ್ರೀ ನರೇಂದ್ರ ಕಾಮತ್ ಇವರಿಂದ ಯೋಗ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ‍್ಯಕ್ರಮ ನಡೆಯಿತು. ಆರೋಗ್ಯ ಮೇಳದಲ್ಲಿ ಒಟ್ಟು ೧೮೫೨ ಫಲಾನುಭವಿಗಳು ಭಾಗವಹಿಸಿದ್ದು, ೧೧೦ ಆಯುಷ್ಮಾನ್ ಭಾರತ್ ಕರ‍್ಡ್ / ಆರೋಗ್ಯ ರ‍್ನಾಟಕ ಕರ‍್ಡ್, ಎನ್.ಸಿ.ಡಿ. ಘಟಕದಿಂದ ೨೧೧ ಜನರಿಗೆ ಮಧುಮೇಹ ತಪಾಸಣೆ, ೪೫ ಜನರಿಗೆತಂಬಾಕು ನಿಲುಗಡೆ ಆಪ್ತಸಮಾಲೋಚನೆ, ೧೧೨ ಆಯರ‍್ವೇದಿಕ್ ವಿಭಾಗದಲ್ಲಿ , ೧೬೦ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣೆ, ೭೦ ಕ್ಯಾನ್ಸರ್ ತಪಾಸಣೆ, ತಾಲೂಕು ಅರೋಗ್ಯಾಧಿಕಾರಿ ಕಛೇರಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ವಿವಿಧ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ನಡೆಯಿತು. ಇಲಾಖೆಯ ವಿವಿಧ ಕರ‍್ಯಕ್ರಮಗಳ ಬಗ್ಗೆ ಆರೋಗ್ಯ ಮಾಹಿತಿ ಶಿಕ್ಷಣ ನೀಡಲಾಯಿತು. ಶ್ರೀ ಶಿವಕುಮಾರ್ ಕಾರ್ಕಳ ಇವರು ಪ್ರಾಥನೆ ಹಾಗೂ ಶ್ರೀ ಗಣೇಶ್, ಗಂಗೊಳ್ಳಿಯವರಿಂದ ನಾಡಗೀತೆ, ಶ್ರೀ ಗೋಪಾಲ್ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕರು ಸ್ವಾಗತಿಸಿ, ತಾಲೂಕು ಅರೋಗ್ಯಾಧಿಕಾರಿಗಳಾದ ಡಾ. ಕೃಷ್ಣಾನಂದ ಶೆಟ್ಟಿ ಇವರು ವಂದಿಸಿದರು. ಶ್ರೀ ಸಂಜಯ್, ದೈಹಿಕ ಶಿಕ್ಷಕರು, ಭುವನೇಂದ್ರ ಕಾಲೇಜು ಕಾರ್ಕಳ ಇವರು ಕಾರ‍್ಯಕ್ರಮ ನಿರೂಪಿಸಿದರು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.