



ಕಾರ್ಕಳ: ಬಾಂಧವ್ಯ ಯುವಕ ಮಂಡಲ, ಮಂಗಳಾನಗರ ಇದರ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಉಡುಪಿ ಪ್ರಾಥಮಿಕ ಆರೋಗ್ಯ ಕೇಂದ್ರ, ಅಜೆಕಾರು ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ (NCD ವಿಭಾಗ) ಇವರ ಸಂಯುಕ್ತ ಸಹಭಾಗಿತ್ವದಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ ಮತ್ತು ಪೊರೆ ಶಸ್ತ್ರ ಚಿಕಿತ್ಸೆ (ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ) ಶಿಬಿರ ಕಾರ್ಯಕ್ರಮ ವು ಮಾ.23 ರಂದು ಮರ್ಣೆಗ್ರಾಮದ ಮಂಗಳಾನಗರ ದ ಸ.ಕಿ ಶಾಲಾ ವಠಾರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮ ವು ಪೂರ್ವಾಹ್ನ ಘಂ. 9-30ರಿಂದ ಮಧ್ಯಾಹ್ನ ಘಂ.1-00 ವರೆಗೆ ನಡೆಯಲಿದ್ದು , ಕಣ್ಣಿನಲ್ಲಿ ಬರುವ ಪೊರೆ ಅಲ್ಲದೇ ಕಣ್ಣಿಗೆ ಸಂಬಂದಿಸಿದ ಇನ್ನೂ ಹಲವು ತರಹದ ಅನಾನುಕೂಲತೆಯಿಂದ ಕಣ್ಣಿನ ತೊಂದರೆಯುಳ್ಳವರಿಗೆ ಚಿಕಿತ್ಸೆಯನ್ನು ಉಚಿತವಾಗಿ ನೆರವೇರಿಸಲಾಗುವುದು. ಕಾರ್ಯಕ್ರಮದಲ್ಲಿಉಡುಪಿ ಜಿಲ್ಲಾ ಅಂದತ್ವ ನಿವಾರಣಾ ವಿಭಾಗದಿಂದ ಆಯ್ದ ಫಲಾನುಭವಿಗಳಿಗೆ ಉಚಿತ ಕನ್ನಡಕ ನೀಡಲಾಗುವುದು. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಬಾಂಧವ್ಯ ಯುವಕ ಮಂಡಲ, ಮಂಗಳಾನಗರ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ.ಪ್ರತಾಪ್ ಶೆಟ್ಟಿ : 984438099 ಜಯಾನಂದ ಕುಲಾಲ್ : 9901339206 ಅವರನ್ನು ಸಂಪರ್ಕಿಸಬಹುದು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.