



ಕಾರ್ಕಳ: ಹಣ ನೀಡುವುದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದ ವ್ಯಕ್ತಿ, ಕರೆ ಸ್ವೀಕರಿಸುತ್ತಿಲ್ಲ ಎಂದು ಕೋಪಗೊಂಡ ಬೈಕಂಪಾಡಿಯ ಹಬೀಬ್ ಎಂಬಾತ, ಹಣ ಪಡೆದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಲ್ಯಾಂಡ್ ಲಿಂಕ್ಸ್ ಉದ್ಯಮಿ ಇಲಿಯಾಸ್ ಎಂಬವರಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮಂಗಲಪಾದೆ ಎಂಬಲ್ಲಿ ನಡೆದಿದೆ. ಈ ವಿಚಾರವಾಗಿ ಹಲ್ಲೆಗೊಳಗಾದ ಲ್ಯಾಂಡ್ ಲಿಂಕ್ಸ್ ಕೆಲಸಗಾರ ಇಲಿಯಾಸ್ ಅವರು ಬೈಕಂಪಾಡಿಯ ಹಬೀಬ್ ಹಾಗೂ ಆತನ ಅಣ್ಣ ಸಿದ್ದೀಕ್ ವಿರುದ್ಧ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇಲಿಯಾಸ್ ಮಂಗಳೂರಿನ ಬೈಕಂಪಾಡಿಯ ಹಬೀಬ್ ಎಂಬಾತನೊAದಿಗೆ ವ್ಯವಹಾರದ ವಿಚಾರಕ್ಕೆ ಹಣ ಪಡೆದಿದ್ದರು . ಈ ಹಣವನ್ನು ಅವರ ಪರಿಚಯದ ಸಂದೀಪ್ ಭಟ್ ಎಂಬುವವರು ಕೊಡುವುದಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಆದರೆ ಇತ್ತೀಚೆಗೆ ಸಂದೀಪ್ ಭಟ್ ದೆಹಲಿಗೆ ಹೋಗಿದ್ದ ಕಾರಣ, ಫೋನ್ ರಿಸೀವ್ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಹಬೀಬ್‌ನು ಆತನ ಅಣ್ಣ ಸಿದ್ದೀಕ್‌ನೊಂದಿಗೆ ಜ. ೨೪ ರಂದು ಇಲಿಯಾಸ್ ಅವರು ಕೆಲಸ ಮಾಡುತ್ತಿದ್ದ ಕಾರ್ಕಳದ ಮಂಗಲಪಾದೆಯ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ತಕರಾರು ತೆಗೆದು ಪಿಕ್ಕಾಸಿನ ಮರದ ಹಿಡಿಯಿಂದ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ, ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯಿಂದ ದೈಹಿಕವಾಗಿ ನೋವು ಉಂಟಾಗಿದ್ದು ಇದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ, ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.