



ಕಾರ್ಕಳ: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯೋರ್ವರು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಸಾಲ್ಮರ ಜರಿಗುಡ್ಡೆ ಸುರಕ್ಷಾ ಸೇವಾಶ್ರಮದಲ್ಲಿ ಆ.30ರಂದು ನಡೆದಿದೆ. ಮೃತರನ್ನು 92ವರ್ಷದ ಸುಂದರಿ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರನ್ನು ಆರು ವರ್ಷಗಳ ಹಿಂದೆ ಪೌಲ್ ಎಂಬವರು ಸುರಕ್ಷಾ ಸೇವಾಶ್ರಮಕ್ಕೆ ಕರೆತಂದು ಬಿಟ್ಟು ಹೋಗಿದ್ದರು. ಇವರು ಓರ್ವ ಮಗನಿದ್ದು, ಆತ ಬೆಂಗಳೂರಿನಲ್ಲಿ ವಾಸಕೊಂಡಿದ್ದಾರೆ. ಆತನಿಗೆ ಹಲವು ಬಾರಿ ವಿಷಯ ತಿಳಿಸಿದರೂ ತಾಯಿಯನ್ನು ನೋಡಲು ಬಂದಿರಲಿಲ್ಲ. ಆ.30ರಂದು ಸಂಜೆ ಸುಂದರಿ ಶೆಟ್ಟಿ ಅವರು ತನಗಿದ್ದ ಉಬ್ಬಸ ಹಾಗೂ ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ಠಾಣೆ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.