



ಕಾರ್ಕಳ: ಹಟ್ಟಿಯಲ್ಲಿ ಕಟ್ಟಿದ್ದ ದನಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಬೊರ್ಕಟ್ಟೆ ಯ ಕರಿಯಕಲ್ಲು ಕಜೆ ಎಂಬಲ್ಲಿ ನಡೆದಿದೆ .
ಈ ಕುರಿತು ಯಶೋಧ ಆಚಾರ್ಯ ಅವರು ಪೊಲೀಸರಿಗೆ ದೂರು ನೀಡಿದ್ದು , ಹೈನುಗಾರಿಕೆ ಮಾಡಿಕೊಂಡಿದ್ದ ಯಶೋಧ ಆಚಾರ್ಯ ಅವರು ತಮ್ಮ ದನಗಳನ್ನು ಹಟ್ಟಿಯಲ್ಲಿ ಕಟ್ಟಿದ್ದರು . ಬೆಳಗ್ಗೆ ನೋಡಿದಾಗ ಹಟ್ಟಿಯಲ್ಲಿ ದನ ಇಲ್ಲದೇ ಇರುವುದು ಗಮನಕ್ಕೆ ಬಂದಿದೆ.
ಅದೇ ರೀತಿ ದೂರುದಾರರ ಪಕ್ಕದ ಮನೆಯ ಸುಧಾಕರ ಶೆಟ್ಟಿಯವರ ಹಟ್ಟಿಯಲ್ಲಿ ಕಟ್ಟಿದ್ದ ಜರ್ಸಿ ದನ ಕೂಡಾ ಕಳವಾಗಿದ್ದು , ದನಗಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.