



ಕಾರ್ಕಳ: ಪ್ಲಾಸ್ಟಿಕ್ ಪರಿಕರಗಳ ಬಳಕೆಗಳು ಎಗ್ಗಿಲ್ಲದೆ ಉಪಯೋಗಿಸುತಿರುವುದು ಮಾನವನ ಆರೋಗ್ಯದ ಮೇಲೆ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಈ ಕಾಲಘಟ್ಟದಲ್ಲಿಯು ಗ್ರಾಮೀಣ ಕರಕುಶಲ ವಸ್ತುಗಳನ್ನು ದಿನಬಳಕೆಗೆ ಮನೆಗಳಲ್ಲಿ ಬಳಸುತ್ತಿರುವುದು ಕಂಡು ಬರುತ್ತಿದೆ . ಅದರಲ್ಲೂ ಉಡುಪಿಯ ಅಷ್ಟಮಠಗಳ ರಥಬೀದಿಯಲ್ಲಿ ಮಳಿಗೆಗಳಲ್ಲಿ ಮಾರಾಟವಾಗುವ ಕೃಷ್ಣನ ಕಡೆಗೋಲು ಎಲ್ಲರ ಅಕರ್ಷಣೆಗೆ ಕಾರಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತಯಾರಾಗುವ ಕೃಷ್ಣ ನ ಕಡೆಗೋಲು ದೇಶ ವಿದೇಶಗಳಲ್ಲಿ ಭಾರಿ ಬೇಡಿಕೆಯಿದೆ . ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಶುಂಠಿಕುಮೇರ್ ಎಂಬಲ್ಲಿನ ಕುಟುಂಬವೊಂದು ಇದೆ ಗುಡಿಕೈಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದೆ. ಸದಾನಂದ ಗುಡಿಗಾರ್ ಸಹೊದರರು ಕಡೆಗೋಲು ತಯಾರಿಕೆಯಲ್ಲಿ ಪರಿಣಿತರು .ಅವರು ದಿನವೊಂದಕ್ಕೆ ಸರಾಸರಿ ನೂರಕ್ಕೂ ಹೆಚ್ಚು ಕಡೆಗೋಲನ್ನು ತಯಾರಿಸುತಿದ್ದಾರೆ.
ಸದಾನಂದ ಗುಡಿಗಾರರ ಸಾರಥ್ಯದಲ್ಲಿ ಜನಾರ್ಧನ ಗುಡಿಗಾರ, ನಾರಾಯಣ ಗುಡಿಗಾರ . ಸಹೋದರರ ರು ತಮ್ಮ ವೃತ್ತಿ ಜೀವನ ನಡೆಸುತಿದ್ದಾರೆ.
ಸದಾನಂದ ಗುಡಿಗಾರ ಅನುವಂಶಿಕ ವೃತ್ತಿಯನ್ನು ಮುನ್ನಡೆಸಿಕೊಂಡು ಬಂದಿದ್ದು ಪ್ರಸ್ತುತ 64 ವರ್ಷ ಹರೆಯದಲ್ಲು ತನ್ನ ಅಸಕ್ತಿ ಗ ಕಳೆಗುಂದಿಲ್ಲ, ಅವರ ಜೊತೆ ತನ್ನ ಮಕ್ಕಳಾದ ಪ್ರಶಾಂತ, ಪ್ರಮೋದ್ ಗುಡಿಕೈಗಾರಿಕೆಯನ್ನು ಕಲಿಸಿ ಕೊಡುತಿದ್ದಾರೆ
ಉಡುಪಿಗೆ ಅಗಮಿಸುವ ಲಕ್ಷಾಂತರ ಪ್ರವಾಸಿಗರು ಕೃಷ್ಣನ ಕಡೆಗೊಲನ್ನು , ಕೃಷ್ಣನ ಭಕ್ತಿಯ ಪ್ರತೀಕವಾಗಿ ಕಡೆಗೋಲನ್ನು ಮಳಿಗೆಗಳಲ್ಲಿ ಖರಿದಿಸಿ ಮನೆಗೆ ಒಯ್ಯುವುದು ವಾಡಿಕೆಯಾಗಿದೆ.
ಸದಾನಂದ ಗುಡಿಗಾರ ಸಹೊದರರು ವಾಡಿಕೆಯ ಕಡೆಗೋಲನ್ನು ತಯಾರಿಕೆಗೆ ಉಪ್ಪಳಿಕೆ ಮರವನ್ನು ಬಲಸುತ್ತಾರೆ ಮೊಸರು ಕಡೆಯುವ ಕಡೆಗೋಲಿಗಾಗಿ . ಹೊನ್ನೆ ಹಾಗೂ ಇತರ ಉತ್ತಮ ಜಾತಿಯ ಮರಗಳನ್ನು ಇವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದು ವಾಡಿಕೆ ಕಡೆಗೋಲಿನ ಬೆಲೆಗಿಂತ ಅಧಿಕವಾಗಿದ್ದು, ಇದರ ಬಾಳಿಕೆಯೂ ಧೀರ್ಘಕಾಲಿಕವಾಗಿದೆ.ಇದರ ಜೊತೆ ವಿವಿಧ ರಾಗಿ ಮುದ್ದೆ ತಯಾರಿಕೆಯ ಕೋಲು, ಗುಲ್ಡಾನ್ , ವಿವಿಧ ಗಾತ್ರಕ್ಕೆ ತಕ್ಕಂತೆ 1 ಅಡಿಯಿಂದ ಹತ್ತು ಅಡಿ ವರೆಗಿನ ಬೃಹತ್ ಗಾತ್ರದ ಕೃಷ್ಣ ಕಡೆಗೋಲು , ಕೋಲಾಟದ ಕೋಲುಗಳು ಒನಕೆ , ಬಲಾಯಿ ಗಳು ಸೇರಿದಂತೆ ಹತ್ತಕ್ಕು ವಿವಿದ ಅಕಾರದ ಪರಿಕರಗಳನ್ನು ತಯಾರಿಸುತ್ತಾರೆ
ನಾರಾಯಣ ಗುಡಿಗಾರ ಜನಾರ್ಧನ ಗುಡಿಗಾರ ಇವರು ದಾರಂದ ಕೆತ್ತನೆಗಳಲ್ಲಿ ಪರಿಣತರು . ಬಾಗಿಲುಗಳಲ್ಲಿ ವಿನ್ಯಾಸಯುಳ್ಳ ಕೆತ್ತನೆಗಳು , ದೇವಸ್ಥಾನಗಳಿಗೆ, ಐಶಾರಾಮಿ ಮನೆಗಳಿಗೆ ಬಾಗಿಲುಗಳನ್ನು ತಯಾರಿಸುವಲ್ಲಿ ಹೆಚ್ಚಿನ ಬೇಡಿಕೆಯಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.