



ಕಾರ್ಕಳ : ಕಸಬಾ ಗ್ರಾಮದ ಚತುರ್ಮುಖ ಬಸದಿ ಬಳಿ ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಸಬಾ ಗ್ರಾಮದ ಸಾಲ್ಮರ ಜರಿಗುಡ್ಡೆ ನಿವಾಸಿ ಮೊಹಮ್ಮದ್ ಅಶ್ಫಾನ್(20) ಹಾಗೂ ನಲ್ಲೂರು ಪೇರಲ್ಕೆ ನಿವಾಸಿ ರಜೀಮ್ (31) ಬಂಧಿತ ಆರೋಪಿಗಳು.
ಈ ಇಬ್ಬರು ಆರೋಪಿಗಳು ಕಾರ್ಕಳ ಚತುರ್ಮುಖ ಬಸದಿ ಬಳಿ ಡ್ರಗ್ಸ್ ಮಾರಾಟ ಮನಾಡುತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಕಳ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ ನೇತೃತ್ವದ ತಂಡ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಮಂಜುನಾಥ್ ಅವರೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಬಂಧಿತರಿAದ ಮೆಥಾಪಿಟಮೈನ್ ಎಂಬ ಮಾದಕ ವಸ್ತು, ರಿಡ್ಝ್ ಕಾರು ಹಾಗೂ ಇತರ ವಸ್ತುಗಳು ಸೇರಿದಂತೆ ಒಟ್ಟು 3,66,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.