



ಕಾರ್ಕಳ: ಮರಾಠಿ ಸಮಾಜ ಸೇವಾ ಸಂಘ ಕಾರ್ಕಳ ಇವರ ಆಶ್ರಯದಲ್ಲಿ,ಶಿವಾಜಿ ಜಯಂತಿ ಪ್ರಯುಕ್ತ,ಸಂಘದ ಸ್ಥಾಪಕಾಧ್ಯಕ್ಷ ಜಿಲ್ಲಾ ಪರಿಷತ್ ಸದಸ್ಯರಾಗಿದ್ದ ದಿ.ವಿ.ದೇಜಪ್ಪ ನಾಯ್ಕ್ ಕಾರ್ಕಳ, ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕ ದಿ.ಶೇಖರ ನಾಯ್ಕ್ ಮುದ್ರಾಡಿ ಹಾಗೂ ನಿವೃತ್ತ ಉಪ ತಹಶೀಲ್ದಾರ್ ಕೆ.ಪಿ.ನಾಯ್ಕ್ ಮಾಳ ಇವರ ಸ್ಮರಣಾರ್ಥ ಉಡುಪಿ-ದಕ್ಷಿಣ ಕನ್ನಡ ಜಿಲ್ಲಾ ಪುರುಷರ ವಾಲಿಬಾಲ್, ಕಾರ್ಕಳ-ಹೆಬ್ರಿ ತಾಲೂಕು ಪುರುಷರ ಮತ್ತು ಮಹಿಳೆಯರ ಹಗ್ಗಜಗ್ಗಾಟ, ಮಹಿಳೆಯರ ತ್ರೋಬಾಲ್ ಪಂದ್ಯಾಟ ಹಾಗೂ ಅಥ್ಲೆಟಿಕ್ ಕ್ರೀಡಾಕೂಟ,ಕ್ರೀಡಾ ಸಂಭ್ರಮ 2024 ಕಾರ್ಯಕ್ರಮವು ಫೆ.18ರಂದು ಭಾನುವಾರ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶೇಖರ ಕಡ್ತಲ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಉಡುಪಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ನಿವೃತ್ತ ಸಿನಿಯರ್ ಮ್ಯಾನೇಜರ್ ಸೀತಾರಾಮ ನಾಯ್ಕ್, ನಿವೃತ್ತ ಶಿಕ್ಷಕ ಜನಾರ್ಧನ ನಾಯ್ಕ್ ಅಜೆಕಾರು, ಚಾಂತಾರು ದೈಹಿಕ ಶಿಕ್ಷಣ ಪರಿವೀಕ್ಷಕ ರವೀಂದ್ರ ನಾಯ್ಕ್,ನಿವೃತ್ತ ಭೂಸೇನಾ ಯೋಧ ಕೇಶವ ನಾಯ್ಕ್, ಗಂಜಿಮಠ , ದ.ಕ.ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ನಾಯ್ಕ್ ಭಾಗವಹಿಸಲಿದ್ದಾರೆ. ಸಂಘದ ಪದಾಧಿಕಾರಿಗಳು, ಉಭಯ ತಾಲೂಕಿನ ಹಿರಿಯ ಕಿರಿಯ ಸಾವಿರಾರು ಮರಾಠಿ ಬಾಂಧವರು, ತಾಲೂಕಿನ ಹಗ್ಗ ಜಗ್ಗಾಟ ಮತ್ತು ತ್ರೋಬಾಲ್ ತಂಡಗಳು, ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರತಿಷ್ಠಿತ ವಾಲಿಬಾಲ್ ತಂಡಗಳು ಭಾಗವಹಿಸಲಿವೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಸಮಾಜ ಬಾಂಧವರು ಭಾಗವಹಿಸಿ ಕ್ರೀಡೆಗೆ ಪ್ರೋತ್ಸಾಹಿಸಿ ವ್ಯವಸ್ಥೆಯಲ್ಲಿ ಕೈ ಜೋಡಿಸುವಂತೆ ಎಂದು ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.