



ಕಾರ್ಕಳ: ಇತ್ತೀಚೆಗೆ ಅಗಲಿದ ಶ್ರೀಮದ್ ಭುವನೇಂದ್ರ ಸಮೂಹ ವಿದ್ಯಾಸಂಸ್ಥೆ ಗಳ ಆಡಳಿತ ಮಂಡಳಿ ಎಸ್ ವಿ ಎಸ್ ವಿ ಫಂಡ್( ರಿ) ಕಾರ್ಕಳ ಇದರ ಅಧ್ಯಕ್ಷರಾದ ಶ್ರೀ ಕುಕ್ಕುಂದೂರು ವಾಮನ ಕಾಮತ್ ರವರಿಗೆ ವಿದ್ಯಾಸಂಸ್ಥೆಯಲ್ಲಿ ಶ್ರದ್ಧಾಂಜಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಹಿರಿಯ ವಿಶ್ರಾಂತ ಲೆಕ್ಕ ಪರಿಶೋಧಕ ಶ್ರೀ ಕೆ ಕಮಲಾಕ್ಷ ಕಾಮತ್ ರವರು ಆಗಮಿಸಿ ಅಗಲಿದ ಮಹನೀಯರ ಕುರಿತು ಮಾತನಾಡುತ್ತಾ ವಾಮನ ಕಾಮತ್ ರವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದವರು.ಸರಳ ಜೀವನ ಉನ್ನತ ಚಿಂತನೆ ಅವರ ಶ್ರೇಷ್ಠ ವ್ಯಕಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.ದೇಶಭಕ್ತಿ ದೇಶ ಪ್ರೇಮವನ್ನು ಬಾಲ್ಯದಿಂದಲೇ ಮೈಗೂಡಿಸಿಕೊಂಡ ಇವರು ಆದರ್ಶ ನಡೆನುಡಿಗಳಿಂದ ವಿದ್ಯಾಸಂಸ್ಥೆ ಯೂ ಕೂಡ ಉನ್ನತ ಸಾಧನೆಯ ಹಾದಿಯಲ್ಲಿ ಮುಂದುವರಿಯಲು ಕಾರಣಕರ್ತರಾಗಿದ್ದರು. ಓರ್ವ ಆರ್ ಎಸ್ ಎಸ್ ಸ್ವಯಂಸೇವಕರಾಗಿದ್ದರು ಎಂದು ಸ್ಮರಿಸಿಕೊಂಡರು.
ಸಂಸ್ಥೆಯ ನಿಕಟಪೂರ್ವ ಮುಖ್ಯೋಪಾಧ್ಯಾಯ ಶ್ರೀ ಪಿ ಶ್ರೀಧರ್ ಆಚಾರ್ ಉದ್ಯಮಿ ಎಸ್ ಎಂ ರಾವ್ ಶಾಲಾ ಸಂಚಾಲಕ ಶ್ರೀ. ಎಸ್ ನಿತ್ಯಾನಂದ ಪೈ ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ಜ್ಯೋತಿ ಜೆ ಪೈ ಅಗಲಿದ ಮಹನೀಯರ ಕುರಿತು ಗುಣಗಾನ ಮಾಡಿದರು.ಇದೇ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಪ್ರಾಥಮಿಕ ಮತ್ತು ಪ್ರೌಢಶಾಲಾ.ಮುಖ್ಯ ಶಿಕ್ಷಕಿ ಶ್ರೀಮತಿ ವೃಂದಾ ಶೆಣೈ ಶ್ರೀಮತಿ ವಿದ್ಯಾಕಿಣಿ ಶಿಕ್ಷಕ ಬಂಧುಗಳು ಪೋಷಕರು ಹಾಗೂ ಅವರ ಕುಟುಂಬಸ್ಥರು ಆಪಾರ ಅಭಿಮಾನಿಗಳು ಉಪಸ್ಥಿತರಿದ್ದರು. ಆವರ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡಿ ಎರಡು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.