



ಕಾರ್ಕಳ : ಹೆಬ್ರಿ ತಾಲೂಕಿನ ಪ್ರಸಿದ್ಧ ವರಂಗ ಕಂಬಳವು .ಡಿ.೫ ರಂದು ವರಂಗದ ಕಂಬಳ ಗದ್ದೆಯಲ್ಲಿ ನಡೆಯಿತು. ವರಂಗ ಜೈನ ಮಠದ ಯುವರಾಜ ಅರಿಗ ಮಾತನಾಡಿ ಕಂಬಳಕ್ಕೆ ಧಾರ್ಮಿಕ ಮತ್ತು ವೈಜ್ಞಾನಿಕ ಸಂಬAಧವೂ ಇದೆ ಎಂದರು . ಇದೇ ವೇಳೆ ಓಟದ ಕೋಣಗಳನ್ನು ಚೆಂಡೆ ವಾದ್ಯಗಳ ಘೋಷದೊಂದಿಗೆ ಸಾಂಪ್ರದಾಯಕವಾಗಿ ಕಂಬಳ ಕರೆಗೆ ಇಳಿಸಲಾಯಿತು. ಓಟದ ಕೋಣಗಳ ಹಣೆಗೆ ಕುಂಕುಮ ಹಚ್ಚಿ , ಕೋಣಗಳ ಯಜಮಾನರಿಗೆ. ಅಡಿಕೆ ಸಹಿತ ವೀಳ್ಯೆದೆಲೆ ನೀಡಿಕಂಬಳ ಪದಾಧಿಕಾರಿಗಳು ಸ್ವಾಗತಿಸಿದರು. ನೂರಾರು ಕಂಬಳಾಭಿಮಾನಿಗಳು ಪಾಲ್ಗೊಂಡಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.