



ಕಾರ್ಕಳ : ಕಾರ್ಕಳ ಅನಂತ ಶಯನ ಹನುಮಾನ್ ಪೆಟ್ರೋಲ್ ಬಂಕ್ ಸಮೀಪದ ವ್ಯಾಪ್ತಿಯ ನಾಗರಬಾವಿ ಕೆರೆಗೆ ಮಹಿಳೆಯೋರ್ವರು ಆಕಸ್ಮಿಕವಾಗಿ ಜಾರಿಬಿದ್ದ ಘಟನೆ ನ. 24ರಂದು ಸಂಭವಿಸಿದ್ದು, ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ .ದಾನಶಾಲೆ ನಿವಾಸಿ ಗೌರಮ್ಮ (65) ಎಂಬವರೇ ಸಾವಿಗೀಡಾದ ಮಹಿಳೆ. ಗೌರಮ್ಮ ಅವರ ಗಂಡ ಎರಡು ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದು, ಅದೇ ನೋವಿನಲ್ಲಿದ್ದರು ಎನ್ನಲಾಗಿದೆ. ಬುಧವಾರ ಬೆಳಿಗ್ಗೆ ವಾಕಿಂಗ್ ತೆರೆಳುವ ಸಂದರ್ಭ ದುರಂತ ಸಂಭವಿಸಿದೆ. ತಕ್ಷಣವೇ ಸ್ಥಳೀಯರು ಆಕೆಯನ್ನು ಕೆರೆಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರಾದರೂ ಆಕೆಯು ದಾರಿ ಮಧ್ಯೆ ಅಸುನೀಗಿದರು. ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.